ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತತ್ವದ ಭಾವನೆಗಳನ್ನು ಎತ್ತಿ ಹಿಡಿದು ಅವುಗಳನ್ನು ಜೀವನದ ತತ್ವಗಳನ್ನಾಗಿ ಅಳವಡಿಸಿಕೊಂಡಲ್ಲಿ ಅಂಬೇಡ್ಕರ್ ರವರು ಕಂಡ ನಿಜವಾದ ಸಾಮಾಜಿಕ ಪ್ರಜಾಪ್ರಭುತ್ವದ ಕನಸನ್ನು ನಾವೆಲ್ಲರೂ ನನಸಾಗಿಸಬಹುದು.ಹಾಗೆ ಅವರ ಜೀವನ ಚರಿತ್ರೆ ಹಾಗೂ ಅವರು ಸಾಗಿಸಿದ ಬದುಕು ಇಂದಿನ ಯುವಕರಿಗೆ ಪ್ರೇರಣೆಯಾಗಬೇಕು ಆ ದಿಸೆಯಲ್ಲಿ ಯುವ ಜನತೆ ಮಾಹಾತ್ಯಾಗ ಮೂರ್ತಿ ಅಂಬೇಡ್ಕರ್ ರವರ ಹಾದಿಯಲ್ಲಿ ಒಂದಿಷ್ಟು ದೂರ ಕ್ರಮಿಸಿದರೆ ದೇಶಕ್ಕೆ – ವಿಶ್ವಕ್ಕೆ ಉತ್ತಮ ಅಲ್ಲದೆ ನಾವೆಲ್ಲರೂ ಸಮೃದ್ಧವಾಗಿ ಜೀವನ ನಡೆಸಲು ಸಾಧ್ಯ.
ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ತೀರ ವಿಭಿನ್ನ, ಈ ಸಮಾಜವನ್ನು ಆದರ್ಶ ಸಮಾಜವನ್ನಾಗಿ ತಮ್ಮ ಕಲ್ಪನೆಯ ಸುಖಿರಾಜ್ಯ ವನ್ನಾಗಿ ಬದಲಾಯಿಸಿದ ಕೀರ್ತಿ ಬಾಬಾ ಸಾಹೇಬರಿಗೆ ಸಲ್ಲಬೇಕು. ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಪರಸ್ಪರ ದಟೈಸುವ ಒಂದು ಜೋಡಣೆ.
ಮೂಲಭೂತವಾಗಿ ಅದು ಸಹವರ್ತಿಗಳೆಡೆಗೆ ತೋರುವ ಗೌರವ ಭಾವನೆಗಳು ಸೇರಿ ಹತ್ತು ಹಲವಾರು ಸಾಮಾಜಿಕ ಮೌಲ್ಯಾಧಾರಿತ ವೈಜ್ಞಾನಿಕ ಅಭಿವೃದ್ಧಿ ಪರ ಚಿಂತನಗಳ ಸಿದ್ದಾಂತ ಗಳು ದೇಶಕ್ಕೆ ನೀಡಿದ್ದಾರೆ. ಅವರ ತ್ಯಾಗ, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಕಚ್ಚೆದೇಯ ಮನೋಧರ್ಮಗಳ ನೈಜತೆ ವಿಚಾರಗಳು ಇಂದಿನ ಸಮಾಜಕ್ಕೆ ಪ್ರೇರಣೆ, ಮಾರ್ಗದರ್ಶನ ಎನ್ನುವಂದತ್ತು ಸುಳ್ಳಲ್ಲ.
ಮನುಸ್ಮೃತಿ ಬದಿಗಿಟ್ಟು ಅಂಬೇಡ್ಕರ್ ಸ್ಮೃತಿ ಆಧಾರದ ಮೇಲೆ ಆಡಳಿತ ಮತ್ತು ಜೀವನ ನಡೆಸುವ ಸಂಕಲ್ಪ ತೊಟ್ಟಾಗ ಮಾತ್ರ ದೇಶದಲ್ಲಿ ಒಗ್ಗಟ್ಟು ಮೂಡಲು ಸಾಧ್ಯ.ಅಂಬೇಡ್ಕರ್ ಸ್ಮೃತಿ ಎಂದರೆ ಭಾರತದ ಸಂವಿಧಾನ. ಇದು ಮಾನವೀಯ ಮೌಲ್ಯದಿಂದ ಕೂಡಿದೆ. ಸಮಾನತೆ, ಪ್ರಜಾತಂತ್ರ, ಒಕ್ಕೂಟ ವ್ಯವಸ್ಥೆಯಿದೆ.
ಇದರ ಆಧಾರದ ಮೇಲೆ ನಮ್ಮ ಆಡಳಿತ ಮತ್ತು ಜೀವನ ಮಾರ್ಗ ಕಂಡುಕೊಳ್ಳುವುದರಿಂದ ಶೋಷಣೆ, ದಾರಿದ್ರ್ಯ, ಅಸಮಾನತೆ ಇತ್ಯಾದಿ ನಿವಾರಿಸಬಹುದು. ನಮ್ಮ ದೇಶವನ್ನು ಒಗ್ಗಟ್ಟಾಗಿ ಮುಂದುವರಿಸಲು ಇದಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ,ಅಂಬೇಡ್ಕರ್ ಅವರ ಚಿಂತನೆಗಳು, ವಿಚಾರಧಾರೆಗಳನ್ನು ಯುವ ಜನರಿಗೆ ಮುಟ್ಟಿಸುವ ದಿಸೆಯಲ್ಲಿ ಅವರು ಜೀವನ ಪ್ರಯೋಗ ಹೆಚ್ಚು ಪ್ರಭಾವಶಾಲಿ ಹಾಗೆ ಅಂಬೇಡ್ಕರ್ ರವರು
ಜೀವಂತವಾಗಿಲ್ಲದಿದ್ದರೂ ಅವರ ವೈಚಾರಿಕ ಚಿಂತನೆಗಳು ಇನ್ನೂ ಜೀವಂತವಾಗಿ ಇವೇ ಅನ್ನುವದನ್ನು ಮರೆಯಬಾರದು. ಹಾಗಾಗಿ ಅವರ ವಿಚಾರಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳುವ ದಿಸೆಯಲ್ಲಿ ಹೆಜ್ಜೆ ಹಾಕುವುದು ಒಳ್ಳೆಯದು ಹಾಗೆ ನಾಡಿಗೆ – ದೇಶಕ್ಕೆ ಮಾದರಿಯಾಗುವ ಮೂಲಕ ಪ್ರೇರಣೆ ಕೆಲಸ ಮಾಡಿ,ಅಂಬೇಡ್ಕರ್ ರವರ ಗೌರವವನ್ನು ಜಾಗತಿಕ ಮಟ್ಟದಲ್ಲಿ ಮಿಂಚುವಂತೆ ಕಾರ್ಯ ನಿರ್ವಹಣೆ ಮಾಡುವ ಮೂಲಕ ಅವರ ಆಶಯದಂತೆ ಬದುಕುವುದು ಕಲಿಯೊಣ.
ಅಂಬೇಡ್ಕರ್‌ಒಬ್ಬ ರಾಜಕೀಯ ಮುತ್ಸದ್ದಿ, ಸಾಂವಿಧಾನಿಕ ವಿದ್ವಾಂಸ ಮತ್ತು ಬರಹಗಾರರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಹಾಗಾಗಿ ಶತಮಾನಗಳಿಂದಲೂ ತಾರತಮ್ಯವನ್ನೆದುರಿಸಿದ ದಲಿತ ಸಮುದಾಯದಿಂದ ಬಂದಿದ್ದರೂ ಅಂಬೇಡ್ಕರ್‌ಅವರು ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಕಡ್ಡಾಯವನ್ನು ಖಾತ್ರಿಗೊಳಿಸಿ ಕಾನೂನಿನಲ್ಲಿ ತಮ್ಮ ನಂಬಿಕೆಯಿಟ್ಟು ರಾಜಕೀಯ ಮುತ್ಸದ್ದಿತನವನ್ನು ತೋರಿಸಿದರು ಎನ್ನುವ ವಾಸ್ತವವನ್ನು ನಾವು ಗುರುತಿಸಲೇಬೇಕು,ಆದ್ದರಿಂದಲೇ ಇಂದು ಇಡೀ ವಿಶ್ವದಲ್ಲೇ ಅತ್ಯುತ್ಕೃಷ್ಟ ಲಿಖಿತ ಸಂವಿಧಾನವನ್ನು ನಮ್ಮ ಭಾರತ ಹೊಂದಿದೆ ಎಂದರೆ ಅದಕ್ಕೆ ಪ್ರಧಾನ ಗೌರವ ಶಿಲ್ಪಿ, ಸೃಜನಶೀಲ ವ್ಯಕ್ತಿತ್ವದ ಕ್ರಿಯಾಶೀಲ ವ್ಯಕ್ತಿ ಎಂದೇ ಹೆಸರಾಗಿದ್ದ ಡಾ ಅಂಬೇಡ್ಕರ್‌ಅವರು ಪ್ರಮುಖ ಕಾರಣ ಹಾಗೆ ಭಾರತ ಕಂಡ ಒಂದು ಅದ್ಭುತ ಶಕ್ತಿ ಇವರಾಗಿದ್ದರು
ಎನ್ನುವುದು ಮತ್ತೊಂದು ವಿಶೇಷ ಮತ್ತೆ ಇಂದೂ ಹಾಗೂ ಮುಂದೆಯೂ ಶೋಷಿತರೆಲ್ಲರಿಗೂ ಸಮಾನತೆ ಹಾಗೂ ಸ್ವಾಭಿಮಾನದ ಹರಿಕಾರ – ಸಂಕೇತವಾಗಿರುತ್ತಾರೆ ಎನ್ನುವುದು ನಾವ್ಯಾರೂ ಮರೆಯಬಾರದು.ಅವರ ಅಪ್ರತಿಮವಾದ ನಾಗರಿಕ ಹಕ್ಕುಗಳ ಹೋರಾಟ, ಜೊತೆಗೆ ಬಡವರ ಏಳಿಗೆಗಾಗಿ ಶ್ರಮಿಸಿ ಬದುಕಿದ ದಿವ್ಯಚೇತನ.
ಅವರಿಗಿದ್ದ ಜ್ಞಾನದ ಹಂಬಲ ಯುವ ಜನತೆಗೆ ಆಶಾಕಿರಣ ತತ್ವ ಮತ್ತು ಸಕಲ ಜೀವಾತ್ಮರಿಗೂ ಲೇಸನೇ ಬಯಸಿದ 12ನೇ ಶತಮಾನದ ಬಸವಾದಿ ಪ್ರಮಥರು ಹೇಳಿದ ಮಾತನ್ನು ಈ ಸಮಾಜದಲ್ಲಿ ಸಾಕಾರಗೊಳಿಸಿ ಸಮಾನತಾ ಸಮಾಜವನ್ನು ನಿರ್ಮಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರ ಕೊಡುಗೆ ಅಪಾರ ಮತ್ತೆ ಅವರ ರಚಿಸಿರುವ ಭಾರತದ ಸಂವಿಧಾನವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ.
ಅವರ ಸಮ-ಸಮಾಜದ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹೊತ್ತ ಭಾರತ ಸಂವಿಧಾನವನ್ನು ಇಂದು ಜಗತ್ತಿನ ಇತರೆ ದೇಶಗಳೂ ಅನುಕರಿಸುತ್ತಿವೆ ಹಾಗೂ ಅನುಸರಿಸುತ್ತಿವೆ.
ಲೇಖನ-ಚಮನ್ ಷರೀಫ್, ಆದಿವಾಲ.