ರಾಜಸ್ಥಾನಕ್ಕೆ ಲಗ್ಗೆಯಿಟ್ಟ ನಮ್ಮ ನಂದಿನಿ!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಹೆಮ್ಮೆಯ ನಂದಿನಿ! ಹಾಲು ಮತ್ತು ಉತ್ಪನ್ನಗಳು ರಾಜಸ್ಥಾನಕ್ಕೆ ಲಗ್ಗೆಯಿಟ್ಟಿವೆ ಎಂದು ಕಾಂಗ್ರೆಸ್ ಹರ್ಷ ವ್ಯಕ್ತಪಡಿಸಿದೆ.

ಪರಿಶುದ್ಧತೆ ಹಾಗೂ ಗುಣಮಟ್ಟಕ್ಕೆ ಹೆಸರಾದ ನಂದಿನಿ ಹಾಲಿನಉತ್ಪನ್ನಗಳಿಗೆ ದೇಶದಾದ್ಯಂತ ಬೇಡಿಕೆ ವ್ಯಕ್ತವಾಗುತ್ತಿದ್ದು, ಹೊಸವರ್ಷಕ್ಕೆ ರಾಜಸ್ಥಾನದಲ್ಲೂ ತನ್ನ ಚಾಪು ಮೂಡಿಸಲು ಸಜ್ಜಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಹಿಂದಿನ ಬಿಜೆಪಿ ಸರ್ಕಾರ ಗುಜರಾತಿನ ಅಮುಲ್ ಜೊತೆಗೆ ಕೆಎಂಎಫ್ ಅನ್ನು ವಿಲೀನಗೊಳಿಸಲು ಮುಂದಾಗಿತ್ತು. ಆದರೀಗ ರಾಜಧಾನಿ ದೆಹಲಿಯಲ್ಲೂ ಬಹು ಬೇಡಿಕೆ ಸೃಷ್ಟಿಸಿಕೊಂಡಿರುವ ನಂದಿನಿ ಉತ್ಪನ್ನಗಳು ಉತ್ತರದ ರಾಜ್ಯಗಳಿಗೆ ತನ್ನ ಮಾರುಕಟ್ಟೆ ವಿಸ್ತರಿಸುತ್ತಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ರಾಜ್ಯದಲ್ಲಿ ಪ್ರತಿನಿತ್ಯ 1 ಕೋಟಿ ಲೀಟರ್‌ಗೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದುಹೊರರಾಜ್ಯಗಳಿಗೂ ಸರಬರಾಜಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಎಂದು ಕಾಂಗ್ರೆಸ್ ತಿಳಿಸಿದೆ.

ಕರುನಾಡ ರೈತರು ಶ್ರಮದಿಂದ ಕಟ್ಟಿರುವ ಕೆಎಂಎಫ್ ಅನ್ನು ಉಳಿಸಿ, ಬೆಳೆಸುತ್ತೇವೆ ಎಂದು ಹಿಂದೆ ಕಾಂಗ್ರೆಸ್ ಸರ್ಕಾರ ಮಾತುಕೊಟ್ಟಿತ್ತು, ಈಗ ನುಡಿದಂತೆ  ನಡೆಯುತ್ತಿದೆ ಎಂದು ಕಾಂಗ್ರೆಸ್ ಹರ್ಷ ವ್ಯಕ್ತಪಡಿಸಿದೆ.

 

 

- Advertisement -  - Advertisement - 
Share This Article
error: Content is protected !!
";