ನಮ್ಮ ಮಣ್ಣು – ನಮ್ಮ ಆಹಾರ – ನಮ್ಮ ಜೀವನ ಕುರಿತು ಮೂರು ದಿನಗಳ ವಿಶೇಷ ತರಬೇತಿ ಕಾರ್ಯಾಗಾರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ  ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಸೆ.15 ರಿಂದ 17 ರವರೆಗೆ ಕೃಷಿ ಆಯುಕ್ತಾಲಯ ರಾಜ್ಯ ವಲಯ ಯೋಜನೆಯಡಿ ಹಾಗೂ ಸಾಯಿಲ್ ಸಂಸ್ಥೆ ಸಹಯೋಗದೊಂದಿಗೆ ಚಿತ್ರದುರ್ಗ ಜಿಲ್ಲೆಯ ಆಸಕ್ತ ರೈತರಿಗೆ ನಮ್ಮ ಮಣ್ಣು – ನಮ್ಮ ಆಹಾರ – ನಮ್ಮ ಜೀವನಕುರಿತು ಮೂರು ದಿನಗಳ ಉಚಿತ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

 ಈ ತರಬೇತಿ ಕಾರ್ಯಗಾರದಲ್ಲಿ ಸಾಯಿಲ್ ವಾಸುವೆಂದೆ ಚಿರಪರಿಚಿತರಾದ ಪಿ ಶ್ರೀನಿವಾಸು ಮತ್ತು ಅವರ ತಂಡದವರು ಇತ್ತೀಚಿನ ಏರುಪೇರಿನ ಹವಾಮಾನದಿಂದ ನಮ್ಮೇಲ್ಲರ ಆಸ್ತಿಯೂ ಶಕ್ತಿಯೂ ಆಗಿರುವ ಉತ್ಪಾದಕ ಮಣ್ಣು, ನೀರು, ಜಾನುವಾರು ದುರ್ಬಲವಾಗಿದ್ದು, ನಮ್ಮ ಮಣ್ಣುಗಳ ಪರಿಶೀಲನೆ, ನಿಗಾವಣೆ ಮತ್ತು ನಿರ್ವಹಣೆಗಳ ಮೂಲಕ ಸಜೀವಿ ಮಣ್ಣು ನಿರ್ಮಾಣದ ಕುರಿತು ಮಾಹಿತಿಯನ್ನು ಹಂಚಿಕೊಳ್ಳುವರು.

- Advertisement - 

ಸೆ.15 ರ ಬೆಳಿಗ್ಗೆ 9ಕ್ಕೆ ನೋಂದಣಿಯೋಂದಿಗೆ ಪ್ರಾರಂಭವಾಗಿ ರಾತ್ರಿ 9 ರವರೆಗೆ ನನ್ನ ಪ್ರಕಾರ ಮಣ್ಣು ಎಂದರೆ, ಸಜೀವಿ ಮಣ್ಣು ಫೋಷಕಾಂಶಗಳ ತವರು, ಮಣ್ಣು ಮತ್ತು ಮಾನವನ ನಡುವಿನ ಸಂಬಂಧವನ್ನು ತಿಳಿಯುವುದು, ಮಣ್ಣಿನ ಭೌತಿಕ ಗುಣಮಟ್ಟ ಪರಿಶೀಲನೆ ಕ್ರಮಗಳ ಪ್ರಾತ್ಯಕ್ಷಿಕೆ , ಮಣ್ಣಲ್ಲಿನ ಜೀವಿಸಂಕುಲಗಳು ಮತ್ತು ಅವುಗಳ ಪಾತ್ರ ಮತ್ತು ಸೇವೆಗಳ ಪರಿಚಯ – ಪ್ರಾಮುಖ್ಯತೆ ಕುರಿತು ವಿವಿಧ ಅಧಿವೇಶನಗಳು ನಡೆಯುತ್ತವೆ.

ಸೆ.16ರಂದು ಬೆಳಿಗ್ಗೆ 7ಕ್ಕೆ ಮಣ್ಣಿಗೊಂದು ಮರುರೂಪ ವಿವಿಧ ಸಹಜ ಸಾವಯವ ಗೊಬ್ಬರಗಳ ತಯಾರಿಕೆ ಬಳಕೆ ಮೂಲಕ ಆರೋಗ್ಯಮಣ್ಣಿನ ಸೃಷ್ಟಿ , ಮಳೆಯಾಶ್ರಿತ ಬೇಸಾಯದಲ್ಲಿ ದೇಸಿ ತಳಿ ಬಿತ್ತನೆ ಬೀಜಗಳ ಪ್ರಾಮುಖ್ಯತೆ, ಮಳೆಯಾಶ್ರಿತ ಹೊಲಗಳಿಗೆ ಪ್ರಾಕೃತಿಕ ಕೃಷಿ ಪದ್ಧತಿ ಅಳವಡಿಕೆ ಮತ್ತು ವೈವಿಧ್ಯಮಯ ಬೇಸಾಯ, ಕಳೆಗಿಡಗಳು ಮಣ್ಣಿನ ಫೋಷಕರು, ಬೇಸಾಯದ ವೆಚ್ಚಾದಾಯ ನಿರ್ವಹಣೆ ಮತ್ತು ಹೊಲವನ್ನು ಪ್ರಾಕೃತಿಕ ವಲಯವಾಗಿ ರೂಪಿಸುವ ವಿಧಾನದ ಕುರಿತು ವಿಷಯ ಮಂಡನೆ ಮಾಡುವರು.

- Advertisement - 

ಸೆ.16ರಂದು ಬೆಳಿಗ್ಗೆ 9ಕ್ಕೆ ಹೊಲದ ನಕಾಶೆ ಬಿಡಿಸುವುದು, ನನ್ನ ಹೊಲದಲ್ಲಿ ಕೈಗೊಳ್ಳುವ ಚಟುವಟಿಕೆಗಳು, ಮೇಲ್ಮಣ್ಣು ಸಂರಕ್ಷಣಾ ಕ್ರಮಗಳು, ಮಣ್ಣಿಗೆ ಕೊಡುವ ಸಾವಯವ ಗೊಬ್ಬರಗಳು ಮತ್ತು ಮುಂದಿನ ಹಂಗಾಮಿಗೆ ಬೆಳೆ ವೈವಿಧ್ಯತೆಗಳ ಕುರಿತು ಮಾಹಿತಿ ನೀಡಲಾಗುವುದು. ಆದ ಪ್ರಯುಕ್ತ ಆಸಕ್ತ 50 ಜನ ರೈತಭಾಂದವರು ಈ ತರಬೇತಿಯಲ್ಲಿ ಭಾಗವಹಿಸಲು ಮೊಬೈಲ್ ಸಂಖ್ಯೆ 8277931058 ಗೆ ಕರೆಮಾಡಿ ತರಬೇತಿಯ ಸದುಪಯೋಗ ಪಡೆದು ಕೊಳ್ಳಲು ಕೋರಿದೆ.

ಮೊದಲು ನೋಂದಾವಣಿ ಮಾಡಿಕೊಂಡ 50 ಜನ ರೈತಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಹಾಗೂ ತರಬೇತಿಗೆ ಹಾಜರಾಗುವ ರೈತಬಾಂಧವರು ಕಡ್ಡಾಯವಾಗಿ ತಮ್ಮ ಎಫ್‍ಐಡಿ ಕಾರ್ಡ್ ಅಥವಾ ಚುನಾವಣೆ ಗುರುತಿನ ಚೀಟಿಯನ್ನು ತರಲು ಮನವಿ ಮಾಡಲಾಗಿದೆ.

ಹಾಗೂ ತಮ್ಮ ಮಣ್ಣು ಹಾಗೂ ಕಳೆ ಗಿಡಗಳಿಗಿರುವ ಸಂಬಂಧ ತಿಳಿಸಲು ತರಬೇತಿಗೆ ನೋಂದಾವಣಿ ಮಾಡಿ ಭಾಗವಹಿಸುವ ರೈತರು ತಮ್ಮ ಹೊಲದ ಎರಡು ಬೊಗಸೆ ಮೇಲ್ಮಣ್ಣು ಮತ್ತು ತಮ್ಮ ಹೊಲದಲ್ಲಿ ಬೆಳೆದಿರುವ ವಿವಿಧ ಜಾತಿಯ ಕಳೆಗಿಡಗಳನ್ನು ಬೇರು ಸಹಿತ ತರಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಅವರು ಮನವಿ ಮಾಡಿದ್ದಾರೆ.

 

 

 

Share This Article
error: Content is protected !!
";