ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಶಿವಮೊಗ್ಗದಲ್ಲಿ ಇತ್ತೀಚೆಗೆ ನೆಡೆದ ಎರಡು ಧರ್ಮಗಳ ಹಬ್ಬಗಳು ಮತ್ತು ಮೆರವಣಿಗೆಗಳು ಅತ್ಯಂತ ಶಾಂತಿ ಮತ್ತು ಸೌಹಾರ್ದವಾಗಿ ನಡೆದವು. ಪೊಲೀಸ್ ಇಲಾಖೆಗೂ ಇದು ಸವಾಲಾಗಿತ್ತು.
ಆದರೆ ನಮ್ಮ ಹೆಮ್ಮೆಯ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ಅವರು ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಯಶ್ವಸಿಯಾಗಿದ್ದಾರೆ. ಅವರಿಗೆ ಮತ್ತು ಅವರ ಇಡೀ ಪೊಲೀಸ್ ತಂಡಕ್ಕೆ ಶಿವಮೊಗ್ಗ ಜಿಲ್ಲಾ ಜಯಕರ್ನಾಟಕ ಸಂಘಟನೆಯ ಮಹಿಳಾ ಘಟಕದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಸಂಘಟನೆ ಮಹಿಳಾ ಘಟಕದ ಜಿಲ್ಲಾದ್ಯಕ್ಷೆ ನಾಜೀಮಾ ಅವರ ನೇತೃತ್ವದಲ್ಲಿ ಸದ್ಯಸರು ಭೇಟಿಯಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರಾದ ರೇಖಾ, ಸಮೀನಾ ಕೌಸರ್, ಮಂಜುಳಾ, ಜಯಂತಿ, ಪುಷ್ಪ, ಲಕ್ಷೀ, ಆಶಾ, ಪ್ರತಿಭಾ, ಕೌಸರ್, ಜಫರುಲ್ಲಾ ಸೇರಿದಂತೆ ಮುಂತಾದವರಿದ್ದರು.

