ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಕ್ತರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಡತಿಪ್ಪುರು ಗ್ರಾಮದ ದಲಿತ ಕಾಲೋನಿಯಲ್ಲಿ ಚರಂಡಿ ಕಾಮಗಾರಿ ಕಳೆದ ಒಂದು ವರ್ಷದಿಂದ ನೆನೆಗುದ್ದಿಗೆ ಬಿದ್ದಿದೆ.ಗುತ್ತಿಗೆದಾರರ ನಿರ್ಲಕ್ಷ್ಯವೇ ಈ ಅವಸ್ಥೆಗೆ ಕಾರಣ ಅನ್ನುತ್ತಾರೆ ಗ್ರಾಮಸ್ಥರು.
ಚರಂಡಿ ಕಾಮಗಾರಿ ಕುರಿತು ಗ್ರಾಮ ಪಂಚಾಯ್ತಿ ಕೂಡ ಕ್ಯಾರೇ ಎನ್ನುತ್ತಿಲ್ಲ.. ದಲಿತ ಕಾಲೋನಿ ಅನ್ನೋಕಾರಣಕ್ಕೆ ಅಸಡ್ಡೆ ತೋರಲಾಗುತ್ತಿದೆ. ಇಲ್ಲಿ ವಯೋವೃದ್ಧರು, ಚಿಕ್ಕ ಪುಟ್ಟ ಮಕ್ಕಳಿದ್ದು, ಇದೆ ಕಾಲೋನಿಯಲ್ಲಿ ಅಂಗನವಾಡಿ ಕೂಡ ಇದ್ದು ಮಕ್ಕಳು ಚರಂಡಿ ದಾಟಲು ಹರ ಸಾಹಸ ಪಡುವಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರಾದ ಅರಸರಾಜು.
ಗುತ್ತಿಗೆದಾರರಿಗೆ ಕಳೆದ ಒಂದು ವರ್ಷದಿಂದ ನಿರಂತರ ಕರೆ ಮಾಡಿ ಕಾಮಗಾರಿ ಪೂರ್ಣಗೊಳಿಸುವಂತೆ ನಿರಂತರ ಮನವಿ ಮಾಡಲಾಗುತ್ತಿದೆ. ಇಂದು ಮಾಡುತ್ತೇವೆ ನಾಳೆ ಮಾಡುತ್ತೇವೆ ಎನ್ನುವ ಸಾಬೂಬು ಹೇಳಿ ಕಾಮಗಾರಿ ಮುಂದೆ ಹಾಕಲಾಗುತ್ತಿದೆ. ಗ್ರಾಮಸ್ಥರಿಗೆ ಸ್ಥಳೀಯ ಸದಸ್ಯರಾಗಿ ನಾವು ಉತ್ತರಿಸಲು ಆಗುತ್ತಿಲ್ಲ. ಈ ಕುರಿತು ಸಂಭಂದಪಟ್ಟ ಎಲ್ಲಾ ಇಲಾಖೆ ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಗ್ರಾಮಪಂಚಾಯತಿ ಸದಸ್ಯ ಕೃಷ್ಣಮೂರ್ತಿ ತಿಳಿಸಿದರು.

