26 ಕೋಟಿಗೂ ಅಧಿಕ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ

News Desk

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ
ಅವರ ನೇತೃತ್ವದ ಸರ್ಕಾರದ ಕ್ರಮಗಳಿಂದಾಗಿ ಕಳೆದ 11 ವರ್ಷಗಳಲ್ಲಿ 26 ಕೋಟಿಗೂ ಅಧಿಕ ಜನರು ಬಡತನ ರೇಖೆಗಿಂತ ಮೇಲೆ ಬಂದು ಹೊಸ ಮಧ್ಯಮ ವರ್ಗದಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

2011-12 ರಲ್ಲಿ ಶೇ. 27.1 ಇದ್ದ ಕಡುಬಡವರ ಸಂಖ್ಯೆ 2022-23 ರಲ್ಲಿ 5.3 ಇಳಿದಿದೆ ಎಂದು ಇತ್ತೀಚಿನ ವಿಶ್ವ ಬ್ಯಾಂಕ್ ದತ್ತಾಂಶವು ಬಹಿರಂಗಪಡಿಸಿದೆ. 2011-12 ರಲ್ಲಿ 34 ಕೋಟಿ ಕಡುಬಡವರು ದೇಶದಲ್ಲಿದ್ದರು. ಇವರ ಸಂಖ್ಯೆ 2022-23ರಲ್ಲಿ 7.5 ಕೋಟಿಗೆ ಕುಸಿದಿದೆ. 11 ವರ್ಷದಲ್ಲಿ ಸುಮಾರು 26 ಕೋಟಿ ಜನ ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ನಮ್ಮ ದೇಶದಲ್ಲಿ ಅನೇಕ ವರ್ಷಗಳಿಂದ ಗರೀಬಿ ಹಠಾವೋ ಎನ್ನುವ ಘೋಷಣೆ ಕೇಳುತ್ತಿತ್ತು. ಆದರೆ ಈ ಘೋಷಣೆಯಿಂದ ಬಡತನ ಮಾತ್ರ ತೊಲಗಲಿಲ್ಲ. ಈ ಹಿಂದಿನ ಸರ್ಕಾರಗಳು ಬಡವರಿಗಾಗಿ ಸರಿಯಾದ ಯೋಜನೆಗಳನ್ನು ಜಾರಿಗೊಳಿಸಲಿಲ್ಲ. ಮೋದಿ ಸರ್ಕಾರದಿಂದ ಇಂದು ಇವೆಲ್ಲವೂ ಸಾಧ್ಯವಾಗಿದೆ.

ಮೋದಿ ಸರ್ಕಾರದ ಪರಿಣಾಮಕಾರಿ ನೀತಿಗಳ ಅನುಷ್ಠಾನ, ಅರ್ಥಪೂರ್ಣ ಸುಧಾರಣೆಗಳು ಮತ್ತು ಉತ್ತಮವಾಗಿ ವಿನ್ಯಾಸ ಪಡಿಸಿದ ಕಲ್ಯಾಣ ಯೋಜನೆಗಳು ತಲಾ ಆದಾಯ ಹೆಚ್ಚಳಕ್ಕೆ ಕಾರಣವಾಗುತ್ತಿವೆ ಮತ್ತು ಕಡು ಬಡತನ ದರವನ್ನು ಕಡಿಮೆ ಮಾಡುತ್ತಿದೆ ಎಂದು ಬಿಜೆಪಿ ಮಾಹಿತಿ ನೀಡಿದೆ.

 

Share This Article
error: Content is protected !!
";