ಆರ್‌ಟಿಒ ಕಚೇರಿಯ ಹಿರಿಯ ನಿರೀಕ್ಷಕ ಪಿ.ಮಂಜುನಾಥ್ ಇನ್ನಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಗಾರೇಹಟ್ಟಿ ನಿವಾಸಿ
, ಚಿತ್ರದುರ್ಗ ಆರ್‌ಟಿಒ ಕಚೇರಿಯ ಹಿರಿಯ ನಿರೀಕ್ಷಕ ಪಿ.ಮಂಜುನಾಥ್ (59) ಅನಾರೋಗ್ಯದಿಂದ ಮಂಗಳವಾರ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದ ಬಳಿಯ ಹಿಂದು ರುದ್ರಭೂಮಿಯಲ್ಲಿ ಮಂಗಳವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಸಹೋದರ ಪಿ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.

- Advertisement - 

Share This Article
error: Content is protected !!
";