ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕರೆ ಕೊಂಡಾಪುರ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಚಿಕ್ಕುಂತಿ ಡಿ ಅಂಜಿನಪ್ಪ ಕಲಾ ಸೇವಾ ಪ್ರತಿಷ್ಠಾನ ಇವರ ಆಶ್ರಯದಲ್ಲಿ 69 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರೇಣುಕಾ ಜಮದಗ್ನಿ ಕಲ್ಯಾಣ ಅರ್ಥಾತ್ ಕಾರ್ತ್ಯವೀರಾರ್ಜುನ ವಧೆ ಬಯಲಾಟ ನಾಟಕ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಪಿ ಶೇಖರ್, ಈಗಿನ ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಇರುವಂತಹ ಕಲೆಗಳನ್ನು ನಾವು ಮರೆತು ಹೋಗುವಂತಹ ದಿನ ಮಾನಗಳು ನೋಡುತ್ತಾ ಇದ್ದೇವೆ.
ತಾಂತ್ರಿಕ ಯುಗದಲ್ಲಿ ಪ್ರತಿ ನಿತ್ಯ ಜೀವನದಲ್ಲಿ ಟಿವಿ ಮೋಬೈಲ್ ನಿಂದ ಇಂತಹ ಅಪರೂಪದ ಬಯಲಾಟ, ದೊಡ್ಡಾಟ, ನಾಟಕ ಕಲೆಗಳನ್ನು ನೋಡಲು ಆಗುತ್ತಾ ಇಲ್ಲ ಕಲೆ ನಮ್ಮ ನಾಡು ಸಂಸ್ಕೃತಿ ಕಲೆ ಸಂಗೀತ ಸಾಹಿತ್ಯ ದಿಂದ ಕೂಡಿದ ಬಯಲಾಟ ಕಲೆಯಿಂದ ನಮ್ಮ ನಾಡು ಅಜರಾಮರವಾಗಿದೆ ಆದ್ದರಿಂದ ನಾವು ನಮ್ಮ ಪೂರ್ವಿಕರು ಬಯಲಾಟದಂತಹ ಗಂಡು ಕಲೆಗಳನ್ನು ಉಳಿಸಿ ಬೆಳೆಸಲು ಯುವಕರು ಮುಂದಾಗಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.
ಡಾ.ಧೂಪಂ ಅಂಜಿನಪ್ಪ ಗುರುಗಳು ಸಂಗೀತ ಸಾಹಿತ್ಯ ಆದ್ಯಾತ್ಮ ಕೀರ್ತನೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಯುವ ಪೀಳಿಗೆಗೆ ಮಾದರಿಯಾದರು. ಇಂತಹ ಮಹಾನ್ ಗುರುಗಳ ಹೆಸರಿನಲ್ಲಿ ಸ್ಥಾಪಿತವಾದ ಡಿ ಅಂಜಿನಪ್ಪ ಕಲಾ ಸೇವಾ ಪ್ರತಿಷ್ಠಾನವು ಸದಾ ಕಾಲವೂ ಕಲೆ ಕಲಾವಿದರನ್ನು ಸಾಧಕರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನಿರತರಾಗಿರುವುದು ತುಂಬಾ ಶ್ಲಾಘನೀಯ ಕಾರ್ಯ ಎಂದರು.
ಹಿರಿಯ ರಂಗಭೂಮಿ ಕಲಾವಿದ ಜಿ. ಶ್ರೀನಿವಾಸ್ ಮೂರ್ತಿ ಮಾತಾನಾಡಿ, ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಆದರೆ ಕಲೆಯನ್ನು ಕೆಲವರು ಮಾತ್ರ ಆರಿಸಿಕೊಳುತ್ತಾರೆ. ನಮ್ಮ ಜಿಲ್ಲೆಯ ಕೋಟೆ ನಾಡಿನಲ್ಲಿ ಹಲವಾರು ಸಾಹಿತಿಗಳು ಕಲಾವಿದರು ಸಂಶೋದಕರು ನೀಡಿದ ಕೀರ್ತಿ ದೊಡ್ಡದು ಅದರಲ್ಲಿ ಮೋಳಕಾಲ್ಮೂರು ಶ್ರೀ ನುಂಕೆ ಮಲೆ ಸಿದೇಶ್ವರ ಮಹಾನ್ ಕೊಡುಗೆ ನೀಡಿದ ಸಂತರು ಶರಣರು ಆಳಿದ ತಾಲೂಕು ನಮ್ಮ ಮೋಳಕಾಲ್ಮೂರು.
ಕಲಾವಿಧರು ಈ ದೇಶದ ಮೊದಲ ಜನ ಪ್ರತಿನಿಧಿ. ಒಬ್ಬ ಕಲಾವಿದ ನಾಟಕದಿಂದ ಒಬ್ಬ ರಾಜ್ಯದ ಮುಖ್ಯಮಂತ್ರಿ ಯನ್ನಾಗಿ ಮಾಡಿದ ಕೀರ್ತಿ ಕಲಾವಿದನಿಗೆ ಸಲುತ್ತದೆ ಎಸ್ ನಿಜಲಿಂಗಪ್ಪ ನವರು ನಮ್ಮ ಮೊಳಕಾಲ್ಮೂರು ಕ್ಷೇತ್ರ ದಿಂದ ಗೆದ್ದು ರಾಜ್ಯದ ಮುಖ್ಯಮಂತ್ರಿ ಯನ್ನಾಗಿಸಿದ ಕೀರ್ತಿ ನಮ್ಮ ತಾಲೂಕಿಗೆ ಸಲುತ್ತದೆ ನಮ್ಮ ಜಿಲ್ಲೆಯಲ್ಲಿ ಗಡಿ ಭಾಗದಲ್ಲಿ ಇಂತಹ ಬಯಲಾಟ ದಂತಹ ಕಲೆ ಸಾಹಿತ್ಯಕ್ಕೆ ಬಡತನವಿಲ್ಲ ಎಂದು ಕಿವಿಮಾತು ಹೇಳಿದರು.
ಕೂಡ್ಲಿಗಿ ತಾಲೂಕಿನ ಯರ್ರಗುಂಡ್ಲಹಟ್ಟಿ ಆರೂಢ ಪರಮಾನಂದ ಆಶ್ರಮದ ಪರಮಾನಂದ ರೂಢ ಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು.
ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಬಿ.ಮಾರನಾಯಕ, ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ನಿಂಗಪ್ಪ, ಡಿ ಅಂಜಿನಪ್ಪ ಕಲಾ ಸೇವಾ ಪ್ರತಿಷ್ಠಾನ ದ ಅಧ್ಯಕ್ಷ ಬಿಎಸ್. ಮಂಜಣ್ಣ, ತಾಪಂ ಮಾಜಿ ಸದಸ್ಯ ಮೂರ್ತಿ, ಗ್ರಾಪಂ ಸದಸ್ಯ ಲೋಕೇಶ್ ರೆಡ್ಡಿ,
ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿ ಬಳ್ಳಾರಿ ಜಿಲ್ಲಾ ಅಧ್ಯಕ್ಷ ವಾಲ್ಮೀಕಿ ಕೃಷ್ಣ, ಹಿರಿಯ ಹಗಲು ವೇಷ ಕಲಾವಿದ ಶ್ರೀನಿವಾಸ್, ಜಿಬಿ ಪರಮೇಶ್ವರ್, ಮೂರ್ತಿ ಸಂಗೀತ ನಿರ್ದೇಶಕ ಬಂಡಿಹಟ್ಟಿ ಗಾದಿಲಿಂಗಪ್ಪ ಶಿವಕುಮಾರ್, ಖಾದರ್ ವಲಿ, ಕಲಾವಿದರಾದ ತಬಲಾ ವಾದಕ ರಾಮಾಂಜಿನಿ, ನಾಗಲಿಂಗ, ಮಾರಣ್ಣ, ಹೊನ್ನೂರು ವಲಿ, ನಾಗಸಮುದ್ರ ಮರಿಸ್ವಾಮಿ, ದೇವಸಮುದ್ರ ರಾಜ, ರಘು, ಪಾಲಯ್ಯ ಉಪಸ್ಥಿತರಿದ್ದರು.