ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗತಿ
——–
ಉಪವಾಸ ಸತ್ಯಾಗ್ರಹ
ದಾಖಲೆಗಳು ಗಾಂಧಿ
ದಾಸ್ಯ ವಿಮೋಚನೆ
ಮಹಾತ್ಮನೆಂದೇ ಭಾರತ ನಮನ
ಪೂರ್ವದಾಚೆ ಇಂದಿಗೂ
ಲೆಕ್ಕವಿಡದ ದಿನಗಳು
ನಿರಂತರ ಉಪವಾಸ
ನಿನಗಿಂತಲೂ ನಿಖರತೆ
ನಮ್ಮ ಚಳುವಳಿ
ಅರೆ ಬೆತ್ತಲ ಮೈ ಹಾಸಿ
ಉರುಳಿದ್ದೇವೆ
ತೊಗಲುಗಳೇ ತಮಟೆಯಾಗಿಸಿ
ಸದ್ದು ಮಾಡಿದ್ದೇವೆ
ಬೂಟಿಗೆ ಲಾಟಿಗೆ ಕೋವಿಯ ಗುಂಡಿಗೆ
ಎದೆಯೊಡ್ಡಿದ್ದೇವೆ
ಕತ್ತಲೆಯಲ್ಲಿಯೇ ಬಿದ್ದಿದ್ದೇವೆ
ಬಿಡುಗಡೆಯ ಬೆಳಕು ನಮಗೇಕಿಲ್ಲ
ಮಹಾತ್ಮರೆನಿಸಿಕೊಳ್ಳುವುದು
ನಮಗೆಲ್ಲಿಯ ಮಾತು
ನೆಲದ ಮಕ್ಕಳ ಮೇಲೆ
ದಯೆ ಕರುಣೆ ಬೇಕಲ್ಲ
ಶೋಷಣೆ ಶ್ರಮ ಇತ್ಯಾದಿ
ನೀನೇ ಮುನ್ನುಡಿ
ಭೀಮ ದಾರಿಯ ಮುಳ್ಳುಗಳ
ನೀನೇಕೆ ಹಿಡಿದಿಡಲಿಲ್ಲ
ಇಂಡಿಯಾ
ನಿನ್ನ ಮಡಿ ಲೆಕ್ಕದ ಮೈಲಿಗೆ ನಾವು
ಎಲ್ಲ ತೀಟೆಗಳ ಸೂತಕ
ದುಡಿಮೆಲಿ ಪೂಜೆ ಗೌರಿಯೇ
ಉತ್ತಿ ಬಿತ್ತಲು ಬಳಸಿದರು
ಸಣಕಲಾದ ಮೇಲೆ
ಮಾಂಸಕ್ಕೆ ಮಾರಾಟವಾಗುವ
ದನಗಳ ಗತಿಯ ಹಾಗೆ
ಕವಿತೆ-ಕುಮಾರ್ ಬಡಪ್ಪ, ಚಿತ್ರದುರ್ಗ.