ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಬಣ್ಣ ಹಚ್ಚಲು / ಚಿತ್ರ ಬಿಡಿಸಲು ಸಿದ್ಧರಾಗಿದ್ದೀರಾ? ಮಕ್ಕಳೆ ಸುಗ್ಗಿ ಹಬ್ಬ ಸಂಕ್ರಾಂತಿ ಪ್ರಯುಕ್ತ ಜನತಾದಳ ( ಜಾತ್ಯತೀತ) ಸಾಮಾಜಿಕ ಜಾಲತಾಣಗಳ ವಿಭಾಗದ ವತಿಯಿಂದ ನಡೆಯುತ್ತಿರುವ “ತೆನೆ ಹೊತ್ತ ರೈತ ಮಹಿಳೆ”
ಚಿತ್ರಕಲಾ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ, ನಿಮ್ಮ ಚಿತ್ರಕಲೆಯನ್ನು ಅನಾವರಣಗೊಳಿಸಿ. ಆಕರ್ಷಕ ನಗದು ಬಹುಮಾನಗಳನ್ನು ಗೆಲ್ಲಲು ಇದೊಂದು ಉತ್ತಮ ಅವಕಾಶ ಎಂದು ರಾಜ್ಯ ಯುವ ಘಟಕದ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.