ಮೋದಿ ಎಚ್ಚರಿಕೆ ನಂತರವೂ ಡ್ರೋನ್ ಹಾರಿಸುತ್ತಿರುವ ಪಾಕಿಸ್ತಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ-12 ರಂದು ತಾವು ಸಾರ್ವಜನಿಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಕಟು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಪಾಕಿಸ್ತಾನ ಮತ್ತೆ ಗಡಿಯಲ್ಲಿ ಡ್ರೋನ್‌ಗಳನ್ನು ತೂರಿ ಬಿಟ್ಟಿದೆ. ಜಮ್ಮುವಿನ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಕಳೆದ ರಾತ್ರಿ ಪಾಕ್‌ಡ್ರೋನ್‌ಗಳ ಹಾರಾಟ ಕಂಡುಬಂದಿದೆ. ಅದಾಗ್ಯೂ ಎಲ್ಲ ಡ್ರೋನ್‌ಗಳನ್ನು ಹೊಡೆದು ಹಾಕಿರುವುದಾಗಿ ಸೇನೆ ತಿಳಿಸಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಸಾಂಬಾ, ಕಥುವಾ, ರಜೌರಿ ಹಾಗೂ ಜಮ್ಮುವಿನ ಕೆಲವು ಭಾಗಗಳಲ್ಲಿ ಬ್ಲಾಕ್‌ಔಟ್‌ಮಾಡಲಾಗಿದೆ. ಡಿಜಿಎಂಗಳ ನಡುವಿನ ಸಭೆಯಲ್ಲಿ ಶಾಂತಿ ನಿರ್ಧಾರ ಹೊರಬಿದ್ದ ಕೆಲ ಹೊತ್ತಿನಲ್ಲೇ ಪಾಕಿಸ್ತಾನ ಗಡಿಯಲ್ಲಿ ಈ ರೀತಿಯ ಕೃತ್ಯ ಎಸಗುವ ಮೂಲಕ ಕಾಲು ಕೆರೆದು ಜಗಳಕ್ಕೆ ಬರುವಂತಿದೆ. ಭಾರತೀಯ ಸೇನೆ ಸುದ್ದಿಗೋಷ್ಠಿ ನಡೆಸಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು ಇನ್ನೊಂದು ದಾಳಿ ಮಾಡಿದ್ರೆ ನಮ್ಮ ಪ್ರತೀಕಾರ ಭಿನ್ನ ಹಾಗೂ ಘೋರವಾಗಿರುತ್ತೆ ಎಂದು ಗುಡುಗಿದ್ದರು.
ಭಾರತದ ಈ ಸ್ಪಷ್ಟ ಸಂದೇಶದ ಹೊರತಾಗಿಯೂ ಪಾಕಿಸ್ತಾನ ಬಾಲ ಬಿಚ್ಚುವ ಮೂಲಕ ಭಾರತದ ಶಾಂತಿ ಕದಡಿದೆ.

ಪ್ರಧಾನಿ ಮೋದಿಯವರು ಕೂಡ ಪಾಕಿಸ್ತಾನಕ್ಕೆ ದೊಡ್ಡ ಮಟ್ಟದ ಎಚ್ಚರಿಕೆ ನೀಡಿದ್ದರು. ಪಾಕಿಸ್ತಾನದ ಅಣ್ವಸ್ತ್ರದ ಬ್ಲಾಕ್‌ಮೇಲ್‌ಗೆ ನಾವು ಹೆದರಲ್ಲ, ಆಪರೇಷನ್‌ಸಿಂಧೂರ ಮುಗಿದಿಲ್ಲ, ಇದು ಕದನ ವಿರಾಮ ಅಲ್ಲ, ಅಲ್ಪ ವಿರಾಮ ಅಷ್ಟೇ, ಒಂದು ಸಣ್ಣ ಪ್ರಚೋದನೆಯನ್ನು ನಮ್ಮ ಸೇನೆ ಸಹಿಸಲ್ಲ ಎಂದು ನೇರ ಎಚ್ಚರಿಕೆ ನೀಡಿದ್ದರು. ಅದಾಗಿ ಕೆಲವೇ ಹೊತ್ತಿನಲ್ಲೇ ತಡಾ ರಾತ್ರಿ 12 ಗಂಟೆಗೆ ಸುಮಾರಿಗೆ ಡ್ರೋನ್‌ಗಳನ್ನು ಹಾರಿ ಬಿಟ್ಟಿದ್ದು ಪಾಕ್‌ನ ಉದ್ಧಟತನಕ್ಕೆ ತಕ್ಕ ಉತ್ತರ ಕೊಡಬೇಕಿದೆ.

ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುವ ಮೂಲಕ ಪಾಕಿಸ್ತಾನ ಭಾರತದ ವಿರುದ್ಧ ಖ್ಯಾತೆ ತೆಗೆಯುತ್ತಿದೆ. ಇತ್ತ ಭಾರತ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿ, ಪಾಕ್‌ಮೇಲಿನ ಯುದ್ಧಕ್ಕೆ ಬ್ರೇಕ್‌ನೀಡಿದ್ದರೆ. ಪಾಕಿಸ್ತಾನ ಮಾತ್ರ ಜಗತ್ತಿನ ಮುಂದೆ ಓಕೆ ಎಂದು ಹೇಳಿ ಮೋಸದಿಂದ ಭಾರತದ ಮೇಲೆ ದಾಳಿ ಮಾಡುತ್ತಿದೆ. ಮೊದಲ ಕದನ ವಿರಾಮ ಉಲ್ಲಂಘನೆ ಘೋಷಣೆಯಾ ಕೆಲವೇ ಹೊತ್ತಿನಲ್ಲಿ ಜಮ್ಮುವಿನಲ್ಲಿ ಅಟ್ಯಾಕ್‌ಮಾಡಿದ್ದರು. ಈಗ ಮತ್ತದೇ ಕೆಲಸವನ್ನು ಮುಂದುವರಿಸಿದ್ದು ಪಾಕ್‌ನ ಈ ಅಹಂಕಾರಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ಕೊಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

Share This Article
error: Content is protected !!
";