ಸಿಂಧೂ ಜಲ ಒಪ್ಪಂದ ಮರು ಸ್ಥಾಪಿಸಲು ಪದೇ ಪದೇ ಮನವಿ ಮಾಡುತ್ತಿರುವ ಪಾಕಿಸ್ತಾನ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತ ಮತ್ತು ಪಾಕಿಸ್ತಾನ ನಡುವೆ
1960ರಲ್ಲಿ ನಡೆದಿದ್ದ ಸಿಂಧೂ ಜಲ ಒಪ್ಪಂದ (IWT) ಮರು ಸ್ಥಾಪಿಸಲು ಪಾಕಿಸ್ತಾನ ಪದೇ ಪದೇ ಮನವಿ ಮಾಡುತ್ತಿದ್ದು, ಭಾರತ ಮೌನವಾಗಿರಲು ನಿರ್ಧರಿಸಿದೆ.
ಬದಲಾಗಿ ಯಾವುದೇ ಮಾತುಕತೆ ನಡೆಸದೆ ಪಾಕಿಸ್ತಾನದ ನದಿಗಳಿಂದ ಬರುವ ನೀರನನ್ನು ಬೇರೆಡೆಗೆ ತಿರುಗಿಸಲು ಪೂರ್ವಭಾವಿಯಾಗಿ ಆಯಕಟ್ಟಿನ ಸ್ಥಾನಗಳಲ್ಲಿ ತನ್ನ ನೀರಿನ ಸಂಗ್ರಹ ಹಾಗೂ ಕಾಲುವೆ ಮೂಲಸೌಕರ್ಯವನ್ನು ಭಾರತ ಬಲಪಡಿಸುತ್ತಿದೆ.

ಮನವಿ ಪತ್ರ: ಸಿಂಧೂ ಜಲ ಒಪ್ಪಂದ ಅಮಾನತ್ತಿನ ನಂತರ ಪಾಕಿಸ್ತಾನದಿಂದ ನಾಲ್ಕು ಮನವಿ ಪತ್ರಗಳನ್ನು ಸ್ವೀಕರಿಸಿರುವುದನ್ನು ಜಲಶಕ್ತಿ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಜಲಸಂಪನ್ಮೂಲ ಕಾರ್ಯದರ್ಶಿ ಸೈಯದ್ ಅಲಿ ಮುರ್ತಾಜಾ ಕಳುಹಿಸಿದ ಪತ್ರದಲ್ಲಿ ಸಿಂಧೂ ಜಲ ಒಪ್ಪಂದ ಅಮಾನತು ರದ್ದು ಪಡಿಸುವುದು, ನೀರಿನ ಹರಿವಿನ ನಿಯಂತ್ರಣಕ್ಕೆ ಸಹಕಾರದ ಚೌಕಟ್ಟು ಮರುಸ್ಥಾಪನೆಗಾಗಿ ಪಾಕಿಸ್ತಾನದ ಬಯಕೆಯನ್ನು ಸ್ಪಷ್ಟಪಡಿಸಿದೆ. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ ನೇಪಾಳದ ಒಬ್ಬರು ಸೇರಿದಂತೆ 26 ಜನರು ಸಾವನ್ನಪ್ಪಿದ ಮಾರನೇ ದಿನ ಭಾರತವು ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿರುವ ಸಿಂಧೂ ಜಲ ಒಪ್ಪಂದವನ್ನು ಅಮಾನತುಪಡಿಸಿತು.

ನೀರಿನ ಬಿಕ್ಕಟ್ಟು:
ಪಾಕಿಸ್ತಾನ ಪ್ರಸ್ತುತ ತೀವ್ರವಾದ ಬೇಸಿಗೆಯ ಬಿಸಿ ಹಾಗೂ ಭಾರತದ ಸಿಂಧೂ ನದಿ ನೀರು ನಿಯಂತ್ರಣದ ನಡುವೆ ಖಾರಿಫ್ ಬೆಳೆಗಳಿಗಾಗಿ ತೀವ್ರ ನೀರಿನ ಬಿಕ್ಕಟ್ಟು ಎದುರಿಸುತ್ತಿದೆ. ಅಲ್ಲದೇ ವಿಶ್ವಬ್ಯಾಂಕ್‌ಗೆ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ ಎಂದು ವರದಿಗಳು ಹೇಳುತ್ತಿವೆ.

 ಆದರೆ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ವಿಶ್ವ ಬ್ಯಾಂಕ್ ನಿರಾಕರಿಸಿದೆ ಎನ್ನಲಾಗಿದೆ.
ಪಾಕಿಸ್ತಾನದ ಮನವಿಗೆ ಸೂಪ್ಪು ಹಾಕದ ಭಾರತ ಸಿಂಧೂ ಜಲಾನಯನ ಪ್ರದೇಶದಿಂದ ನೀರು ತಿರುಗಿಸಲು ಅನುಕೂಲವಾಗುವಂತೆ ಮೂಲಸೌಕರ್ಯವನ್ನು ಹೆಚ್ಚಿಸಲು ಆದ್ಯತೆ ನೀಡಿದೆ.

 

Share This Article
error: Content is protected !!
";