ಪಾಕಿಸ್ತಾನ ಸೇನೆ ಪ್ರತಿ ಗುಂಡಿನ ದಾಳಿ

SSUCv3H4sIAAAAAAAACpyRz27DIAzG75P2DhHnRkpKkiZ9lWoHQ7wElUIFpNNU9d3Hn1Bx3g3/bH/2Z56fH1VFGFjBybl6hsjHQsrNOgNOaOVxc9i5QTWjKcnD0KEpAc7CaSNAlpCB46uCG3qoNikDfsUksQ7cZtGG6Tvi4HDxGgm+JdKKlxRXORGTvsOnCDkUzG4ssoyS+L860+Mru4EFFf+NCxdGDEqEZOSSSsn1x6G5ldZgm4UuXD00BxkKaKF0N4ILtRRt2q3x7LmN6005E1Z4b06k1ndgMpz422ti5itY68vnzItB3H+yvhVzlHbRwK5KZv8TIWzpceia4dRMtDsdO0r7vSD93iq8TlwnC/mYX8VcWhdhA4J8pCNSqNt+GOtu6qFmrOnqCfp2PI04Dazxh3/9AQAA//8DAFC1dt+YAgAA
News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಪ್ರತಿ ಗುಂಡಿನ ದಾಳಿ ನಡೆಸಿದೆ.
ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಭಾರತವು ಆಪರೇಷನ್ ಸಿಂಧೂರ್
ಪ್ರಾರಂಭಿಸಿದೆ.

ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಭಾರತವು ಗಡಿಯಲ್ಲಿ ತನ್ನ ಬಲವನ್ನು ಹೆಚ್ಚಿಸಿದೆ.

ಮಂಗಳವಾರ ತಡರಾತ್ರಿ ಹಾಗೂ ಬುಧವಾರ ಬೆಳಗ್ಗೆ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಇದಕ್ಕೆ ಪ್ರತಿಯಾಗಿ ಭಾರತ -ಪಾಕ್ ಗಡಿಯಲ್ಲಿ ಮನಸೋಇಚ್ಛೆ ದಾಳಿ ನಡೆಸಿದೆ. ಬುಧವಾರ ಮುಂಜಾನೆ ಪಾಕಿಸ್ತಾನ ಸೇನೆ ಜಮ್ಮು ಮತ್ತು ಕಾಶ್ಮೀರದ ಬಳಿ ಕದನ ವಿರಾಮ ಉಲ್ಲಂಘಿಸಿ ಮತ್ತು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಮನಸ್ಸಿಗೆ ಬಂದಂತೆ ಗುಂಡಿನ ದಾಳಿ ಮಾಡಿದೆ. ಹಲವು ಕಡೆಗಳಿಂದ ಫಿರಂಗಿಗಳನ್ನು ಬಳಸಿ ಶೆಲ್ ದಾಳಿ ನಡೆಸಿದೆ.

ಗುಂಡಿನ ಚಕಮಕಿ-
ಪಾಕಿಸ್ತಾನ ಸೇನೆಯು ಗಡಿ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿತು. ಫಿರಂಗಿಗಳನ್ನು ಬಳಸಿ ಶೆಲ್ ದಾಳಿ ಮಾಡಿತು. ಭಾರತೀಯ ಸೇನೆಯು ಕದನ ವಿರಾಮ ಉಲ್ಲಂಘನೆಗೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನ ಸೇನೆಯು ದಾಳಿಗೆ ಫಿರಂಗಿಗಳನ್ನು ಬಳಸಿದೆ. ಭಾರತದ ಪ್ರತ್ಯುತ್ತರದಲ್ಲಿ ಪಾಕಿಸ್ತಾನ ಸೇನೆಗೆ ಹಾನಿಯಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಪಾಕ್ ಉದ್ಧಟತನ-
ಭಾರತೀಯ ಸೇನೆಯು ಪಾಕಿಸ್ತಾನದ ಮಿಲಿಟರಿಗೆ ಯಾವುದೇ ಹಾನಿ ಮಾಡದೆ, ಉಗ್ರನೆಲೆಗಳನ್ನಷ್ಟೇ ನಾಶ ಮಾಡಿದೆ. ಆದರೆ ಪಾಕಿಸ್ತಾನ ಗಡಿಯಾಚೆಗಿನ ಭಾರತದ ಹಳ್ಳಿಗಳ ಮೇಲೆ ಗುಂಡಿನ ದಾಳಿ ಮಾಡಿದೆ. ಇದರಿಂದ ಮೂವರು ನಾಗರಿಕರು ಮೃತಪಟ್ಟಿದ್ದಾರೆ.

ಪಾಕಿಸ್ತಾನದ ISPR ನ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ಮಾಹಿತಿ ನೀಡಿದ್ದು, ಭಾರತವು ಕೋಟ್ಲಿ, ಮುರಿದ್ಕೆ, ಬಹಾವಲ್ಪುರ, ಚಕ್ ಅಮ್ರು, ಭೀಂಬರ್, ಗುಲ್ಪುರ್, ಸಿಯಾಲ್ಕೋಟ್ ಮತ್ತು ಮುಜಾಫರಾಬಾದ್‌ನ ಎರಡು ಸ್ಥಳಗಳ ಮೇಲೆ ದಾಳಿ ಮಾಡಿದೆ ಎಂದು ಅವರು ಹೇಳಿದ್ದಾರೆ.

ಸಿಯಾಲ್ಕೋಟ್, ಬಹಾವಲ್ಪುರ, ಚಕ್ ಅಮ್ರು ಮತ್ತು ಮುರಿದ್ಕೆ ಅಂತರರಾಷ್ಟ್ರೀಯ ಗಡಿಯಲ್ಲಿದೆ. ಉಳಿದ ಪ್ರದೇಶಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿವೆ.
ಮುರಿದ್ಕೆಯಲ್ಲಿ ಹಫೀಜ್ ಸಯೀದ್ ನೇತೃತ್ವದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಮುಖ್ಯ ಕಚೇರಿಯಿದೆ. ಬಹಾವಲ್ಪುರವು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದೆ. ಇದು ಜೈಶ್-ಎ-ಮೊಹಮ್ಮದ್ ಸಂಘಟನೆಯ ತಳಹದಿಯಾಗಿದೆ.

Share This Article
error: Content is protected !!
";