ಕೇಕ್ ನಲ್ಲಿ ಅರಳಿದ ಅರಮನೆ, ಕೃಷ್ಣರಾಜ ಒಡೆಯರ್ ಪ್ರತಿಮೆ ಹಾಗೂ ಚಿನ್ನದ ಅಂಬಾರಿ

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು:
ಮೈಸೂರು ದಸರಾ ಹಬ್ಬದ ಅಂಗವಾಗಿ 1500 ಕೆ.ಜಿಯ ಕೇಕ್​​ನಿಂದ ಮೈಸೂರು ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಹಾಗೂ ಚಿನ್ನದ ಅಂಬಾರಿ ಹೊತ್ತಿರುವ ಆನೆಯ ಮಾದರಿಗಳನ್ನು ತಯಾರಿಸಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಅರಮನೆಯ ಗತ ವೈಭವ ನೆನಪಿಸುತ್ತಿವೆ.

ಚಾಮರಾಜಪುರಂನ ಶ್ರೀ ಜಯಚಾಮರಾಜ ಅರಸು ಎಜುಕೇಷನ್ ಟ್ರಸ್ಟ್ ಆವರಣದಲ್ಲಿ ಡಿನಿ ಸಿನಿ ಕ್ರಿಯೇಷನ್ ವತಿಯಿಂದ ಆಯೋಜಿಸಿರುವ ಕೇಕ್ ಶೋನಲ್ಲಿ ಅರಮನೆಯ ಮಾದರಿ ಗಮನ ಸೆಳೆಯುತ್ತಿದೆ.

- Advertisement - 

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ ಅಂದಿನ ಮೈಸೂರು ರಾಜ್ಯಕ್ಕೆ ನೀಡಿದ ಅನೇಕ ಕೊಡುಗೆಗಳ ಪೈಕಿ ಕೆಆರ್​ಎಸ್​​, ದೊಡ್ಡ ಗಡಿಯಾರ, ಹೆಚ್​​ಎಎಲ್ ಕಾರ್ಖಾನೆ, ಸಂಗೀತ ಪರಿಕರ, ಪ್ರಾಣಿಗಳು ಸೇರಿದಂತೆ ಮತ್ತಿತರ ಮಾದರಿಯ ಕಲಾಕೃತಿಗಳು ಕೇಕ್​​ನಲ್ಲಿ ಅನಾವರಣಗೊಂಡಿವೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಲೆನಿನ್ ಕುರ್ಮಾ ನಿವಾಸದಲ್ಲಿ ರಕ್ಷಿತ್, ಹರ್ಷಿತ, ಸುಬ, ಮೇಹ ಈ ಐವರು ಕಲಾವಿದರು ಸುಮಾರು ಮೂರು ತಿಂಗಳ ಹಿಂದೆ ಕೇಕ್​ನೊಂದಿಗೆ ಪಾಸ್ದಿಲಾಜ್, ಸಕ್ಕರೆ, ಕ್ರೀಮ್ ಬಳಸಿ ಅರಮನೆ ಮಾದರಿ ತಯಾರು ಮಾಡಿದ್ದಾರೆ.

- Advertisement - 

ಅನಾ ಆಸ್ಟಿನ್ ಅವರು ಕೇಕ್​​ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ, ಹುಲಿ, ಕರಡಿ, ಜಿಂಕೆಗಳ ಮಾದರಿಗಳನ್ನು ತಯಾರಿಸಿದ್ದರೆ, ಸ್ಯಾಮಿ ರಾಮಚಂದ್ರನ್ ಅವರು ಕೂಡ ಕೇಕ್​​ಗಳಲ್ಲಿ ನಾನಾ ಮಾದರಿಗಳನ್ನು ತಯಾರು ಮಾಡಿದ್ದಾರೆ.
ಕೇಕ್ ಶೋನಲ್ಲಿ ಸುಮಾರು
20ಕ್ಕೂ ಮಾದರಿಗಳಿದ್ದು ಎಲ್ಲ ಮಾದರಿಗಳು ಗಮನ ಸೆಳೆಯುತ್ತಿವೆ.

40 ಮಂದಿ ಸೇರಿ 20ಕ್ಕೂ ಹೆಚ್ಚು ಮಾದರಿಗಳನ್ನು ತಯಾರು ಮಾಡಿದ್ದು, ಒಟ್ಟಾರೆ 70 ಲಕ್ಷ ರೂ. ವೆಚ್ಚವಾಗಿದೆ. ಸಾರ್ವಜನಿಕರಿಗೆ ವೀಕ್ಷಣೆ ಮಾಡಲು ಅವಕಾಶ ಇದ್ದು, 60 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಸೆ. 23ರಿಂದ ಅಕ್ಟೋಬರ್ 7ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 10 ರವರೆಗೆ ಕೇಕ್ ಶೋ ನೋಡಲು ಅವಕಾಶ ಕಲ್ಪಿಸಲಾಗಿದೆ.
ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿರುವ ಎಲ್ಲ ಕೇಕ್​​ಗಳನ್ನು ಸಾರ್ವಜನಿಕರು ನೋಡಬಹುದು
, ಆದರೆ ತಿನ್ನಲು ನೀಡುವುದಿಲ್ಲ. ಎಸಿ ತಾಪಮಾನದಲ್ಲಿ ಇದ್ದರೆ ಕೇಕ್​​ಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎನ್ನುತ್ತಾರೆ ಕೇಕ್ ತಯಾರಕರು.

ಮೈಸೂರಿನ ಯದುವಂಶಸ್ಥರು ನಾಡಿಗೆ ನೀಡಿದ ಕೊಡುಗೆಯನ್ನು ಶತ ಶತಮಾನದಿಂದಲೂ ಜನರು ನೆನೆಯುತ್ತಿದ್ದಾರೆ. ಮುಂದಿನ ಸಹಸ್ರಮಾನ ವರ್ಷಗಳು ಬಂದರೂ ಈ ಕೊಡುಗೆಯನ್ನು ನಾನಾ ರೂಪದಲ್ಲಿ ಸ್ಮರಿಸುತ್ತಾರೆ ಎನ್ನುವುದಕ್ಕೆ ಕೇಕ್ ಶೋ ನಿದರ್ಶನದಂತಿದೆ.

ಕೇಕ್ ಪ್ರದರ್ಶನದ ಆಯೋಜಕ ದಿನೇಶ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಆಡಳಿತಾವಧಿಯಲ್ಲಿ ಮೈಸೂರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅವರ ಸೇವೆಯನ್ನು ಜನರು ಸದಾ ಸ್ಮರಿಸಬೇಕು ಎನ್ನುವ ಉದ್ದೇಶದಿಂದ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಇತರೆ ಮಾದರಿ ಕೇಕ್‌ಗಳನ್ನು ಮಾಡಲಾಗಿದೆ. ಇದರಿಂದ ಮೈಸೂರಿನ ಪರಂಪರೆ ಮತ್ತಷ್ಟು ತಿಳಿಯಲಿದೆ ಎಂದಿದ್ದಾರೆ.

 

Share This Article
error: Content is protected !!
";