ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಳಗಾವಿಯ ಸುವರ್ಣ ಸೌಧದ ಮುಂದೆ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪಂಚಮಸಾಲಿ ಲಿಂಗಾಯತ ಸಮುದಾಯದ ಮೇಲೆ ಲಾಠಿಚಾರ್ಜ್ ನಡೆಸಿದ ಪ್ರಮುಖ ಪೊಲೀಸ್ ಗೆ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬಹುಮಾನ ಭಾಗ್ಯ ನೀಡಿದೆ!! ಎಂದು ಬಿಜೆಪಿ ದೂರಿದೆ.
ಅಲ್ಲಿಗೆ ಪಂಚಮಸಾಲಿ ಲಿಂಗಾಯತರ ಮೇಲೆ ಲಾಠಿಚಾರ್ಜ್ ನಡೆಸುವವರಿಗೆ ಸಿಎಂ ಸಿದ್ದರಾಮಯ್ಯ ಅವರು, ಮೊದಲೇ ಬಹುಮಾನ ನೀಡುವ ವಾಗ್ದಾನ ನೀಡಿದ್ದರಾ ಎಂಬ ಅನುಮಾನ ಮೂಡುತ್ತದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೆ, ಬಹುಮಾನ ನೀಡಲು ನೀವು ಅನುಸರಿಸುವ ಮಾನದಂಡವಾದರೂ ಏನು..??!! ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.