ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ವಿಷ್ಣುಶರ್ಮ ಸಂಸ್ಕೃತದಲ್ಲಿ ಬರೆದಿರುವ ಪಂಚತಂತ್ರದ ನೀತಿ ಕಥೆಗಳು ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಅತ್ಯಂತ ಸಹಕಾರಿಯಾಗಿವೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಸುದೀಪ್ ಅಭಿಮತ ವ್ಯಕ್ತಪಡಿಸಿದರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಪಂಚತಂತ್ರದ ಎರಡು ನೀತಿಕಥೆಗಳನ್ನು ಹೇಳಿದರು.
ನೀತಿ ಕಥೆಗಳು ಬುದ್ಧಿಯ ಸಮರ್ಥ ಉಪಯೋಗ, ವ್ಯರ್ಥ ಕನಸು-ಆಲೋಚನೆ ಮಾಡದೆ ಸದಾ ಕಾರ್ಯ ಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತವೆ ಎಂದರು.
ಶಿಬಿರದ ಪ್ರಯುಕ್ತ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ, ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳ ಪಠಣ, ಯತೀಶ್ ಎಂ ಸಿದ್ದಾಪುರ ಅವರಿಂದ ಭಜನಾ ಕಾರ್ಯಕ್ರಮ ನಡೆದರೆ ಡಾ.ಭೂಮಿಕಾ ಅವರು ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸಿದರು.
ತರಗತಿಯಲ್ಲಿ ನೇತಾಜಿ ಪ್ರಸನ್ನ ,ಸುಧಾಮಣಿ, ಅದ್ವೈತ್, ಹರ್ಷಿತಾ,ಲಕ್ಷ್ಮೀ, ಚರಣ್ಯ, ಸಹನಾ, ಸಾಯಿ ಸಮರ್ಥ್, ವಿಷ್ಣು, ವೈಷ್ಣವಿ, ಯಶಸ್,ಜಶ್ವಿತಾ,ವಿವಿಕ್ತ ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು.

