ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ತ್ಯಾಗರಾಜ ಬೀದಿಯಲ್ಲಿ ಪಾಂಡುರಂಗ ವಿಠಲ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ತಾಡಪತ್ರಿ ವಂಶಕ್ಕೆ ಒಲಿದು ಬಂದಿರುವ ಮೂರ್ತಿ ಪಾಂಡುರಂಗ ವಿಠಲ ದೇವಸ್ಥಾನದಲ್ಲಿ ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಿದ ನಂತರ ಪಾಂಡುರಂಗ ವಿಠಲನನ್ನು ರಥದಲ್ಲಿ ಕೂರಿಸಿದ ಬಳಿಕ ರಥವನ್ನು ನೆರೆದಿದ್ದವರು ಸ್ವಲ್ಪ ದೂರ ಎಳೆದು ಭಕ್ತಿ ಸಮರ್ಪಿಸಿದರು.
ಪ್ರತಿ ವರ್ಷದಂತೆ ವೈಶಾಖ ಶುದ್ದ ಪೂರ್ಣಿಮೆಯಂದು ಜರುಗಿದ ರಥೋತ್ಸವದಲ್ಲಿ ಉಡುಪಿಯ ಪೇಜಾವರ ಶ್ರೀಪಾದಂಗಳವರು, ಟಿ.ಎಸ್.ಗೋಪಾಲಕೃಷ್ಣ ಟಿ.ಪಿ.ವಿಠಲರಾವ್, ಸುಧೀಂದ್ರ, ಟಿ.ಸಿ.ಶ್ರೀನಿವಾಸ್ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.
ರಥೋತ್ಸವದ ವೇಳೆ ಮಹಿಳೆಯರು ಪಾಂಡುರಂಗವಿಠಲನನ್ನು ಸ್ಮರಿಸುತ್ತಿದ್ದರೆ. ಪುರುಷರು ಜಾಗಟೆ ಬಾರಿಸುತ್ತಿದ್ದರು. ರಥವನ್ನು ಬಾಳೆಕಂಬ, ವಿವಿಧ ಬಗೆಯ ಹೂವು ಹಾಗೂ ಹಾರಗಳಿಂದ ಅಲಂಕರಿಸಲಾಗಿತ್ತು. ರಥದ ಮುಂಭಾಗ ಹೋಮ ನಡೆಯಿತು.