ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಾಳು ಬಿದ್ದಿರುವ ಶಾಲಾ ಕೊಠಡಿಗಳ ದುರಸ್ತಿಗೆ ಅನುದಾನ ಇಲ್ಲ, ಮಕ್ಕಳಿಗೆ ಶೂ ಇಲ್ಲ, ಸಾಕ್ಸ್ ಇಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಎಲ್‌ಕೆಜಿ-ಯುಕೆಜಿ ಚಿಣ್ಣರಿಗೆ ಬಿಸಿಯೂಟ ಇಲ್ಲ, ಬಿಸಿಯೂಟಕ್ಕೆ ಗುಣಮಟ್ಟದ ಬೇಳೆಯಿಲ್ಲ, ಸಮಯಕ್ಕೆ ಪಠ್ಯ ಪುಸ್ತಕಗಳ ವಿತರಣೆ ಇಲ್ಲ, ಶಾಲೆಗಳಲ್ಲಿ ಶಿಕ್ಷಕರಿಲ್ಲ,
ಇರುವ ಶಿಕ್ಷಕರಿಗೆ ಸಂಬಳವಿಲ್ಲ, 6 ದಿನ ಮಕ್ಕಳಿಗೆ ಮೊಟ್ಟೆ ಕೊಡಲು ಹಣವಿಲ್ಲ, ಮೌಲ್ಯಮಾಪನ ಮಾಡಿರುವ ಶಿಕ್ಷಕರಿಗೆ ಸಂಭಾವನೆ ಕೊಡಲು ದುಡ್ಡಿಲ್ಲ ಎಂದು ಅಶೋಕ್ ತರಾಟೆ ತೆಗೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಈ ಪಾಪರ್ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬಳಿ ಯಾವುದಕ್ಕೂ ದುಡ್ಡಿಲ್ಲ ಎಂದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗರಂ ಆಗಿದ್ದಾರೆ.

