ಫೆಬ್ರವರಿ 28 ರಂದು ಗ್ರಹಗಳ ಪರೇಡ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇದೇ ಫೆಬ್ರವರಿ 28 ರ ಸಂಜೆಯ ಆಕಾಶದಲ್ಲಿ ಚಮತ್ಕಾರ ಸಂಭವಿಸಲಿದೆ. ಆ ದಿನದಂದು ಗ್ರಹಗಳ ಪರೇಡ್ ಅಂದರೆ ಒಂದೇ ಸಾಲಿನಲ್ಲಿ 6 ಗ್ರಹಗಳನ್ನು ಬರಿಗಣ್ಣಿನಲ್ಲಿ ನೋಡಬಹುದಾಗಿದೆ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್. ಟಿ.ಸ್ವಾಮಿ ತಿಳಿಸಿದ್ದಾರೆ.

ಅಂದು ಪಶ್ಚಿಮ ದಿಗಂತದ ಕಡೆ ಕಣ್ಣು ಹಾಯಿಸಿದರೆ, ದಿಗಂತದಲ್ಲಿ ಬುಧ, ಹೊಳೆಯುವ ಶುಕ್ರ, ಕೆಂಪುಬಣ್ಣದ ಶನಿಗ್ರಹ, ತುಸು ಎತ್ತರದಲ್ಲಿ ಪ್ರಕಾಶಮಾನವಾಗಿ ಹೊಳೆಯುವ ಗುರುಗ್ರಹಗಳನ್ನು ನೋಡಬಹುದಾಗಿದೆ.

- Advertisement - 

ಈ ಅಪರೂಪದ ಜೋಡಣೆಯು ಬರಿಗಣ್ಣಿಗೆ ಒಂದು ರೇಖೆಯಂತೆ ಕಂಡರೂ, ವಾಸವದಲ್ಲಿ ಗ್ರಹಗಳು ಬಾಹ್ಯಾಕಾಶದಲ್ಲಿ ತಮ್ಮದೇ ಆದ ಕಕ್ಷೆಗಳಲ್ಲಿರುತ್ತವೆ. ಈ ಘಟನೆಯನ್ನು ಸಂಜೆ 6.30 ರಿಂದ 8 ಗಂಟೆಯವರೆಗೂ ಅರ್ಧ ಗಂಟೆಗಳ ಕಾಲ ನೋಡಬಹುದಾಗಿದೆ.

ಯುರೇನಸ್ ಹಾಗೂ ನೆಪ್ಚೂನ್ ಗ್ರಹಗಳನ್ನು ಬೈನಾಕ್ಯುಲರ್ ಇಲ್ಲವೇ ಉತ್ತಮ ದೂರದರ್ಶಕಗಳ ಮೂಲಕವೇ ನೋಡಬೇಕು. ಮತ್ತೆ ಈ ಘಟನೆ ನೋಡಲು 2040 ರ ತನಕ ಕಾಯಬೇಕು ಎಂದು ಹೆಚ್.ಎಸ್.ಟಿ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - 

Share This Article
error: Content is protected !!
";