ಚಂದ್ರವಳ್ಳಿ ನ್ಯೂಸ್, ಕೊಪ್ಪಳ:
ಆಗ ತಾನೆ ಜನಿಸಿದ ಹಸುಗೂಸನ್ನು ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಝಿರೋ ಟ್ರಾಫಿಕ್ನಲ್ಲಿ ಹುಬ್ಬಳ್ಳಿ ಕಿಮ್ಸ್ಗೆ ಪೋಷಕರು ಕರೆದೊಯ್ಯಲಾದ ಪ್ರಕರಣ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಕುಕನೂರ ತಾಲೂಕಿನ ಗುತ್ತೂರ ದಂಪತಿಗಳಾದ ಮಲ್ಲಪ್ಪ ವಿಜಯಲಕ್ಷ್ಮೀಗೆ ಹತ್ತು ಗಂಟೆಗಳಿಂದೆ ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ನವಜಾತ ಶಿಶುವನ್ನು ಕರೆದುಕೊಂಡು ಬರಲಾಗಿತ್ತು.
ಆದರೆ ಜಿಲ್ಲಾ ಆಸ್ಪತ್ರೆಯಲ್ಲಿ ಮಗು ತಪಾಸಣೆ ಮಾಡಿದ ಬಳಿಕ ಮಗುವಿನ ಕರಳುಗಳು ಹೊರಗಡೆ ಬಂದಿರುವ ಕಾರಣ ಮಗುವಿಗೆ ಆಪರೇಷನ್ ಅವಶ್ಯಕತೆ ಇದೆ ಎಂದು ವೈದ್ಯರು ಹುಬ್ಬಳ್ಳಿಯ ಕಿಮ್ಸ್ಗೆ ರೆಫರ್ ಮಾಡಿದರು.
ಆಸ್ಪತ್ರೆಯಿಂದ ಐದು ಆಂಬ್ಯುಲೆನ್ಸ್ಗಳ ಮೂಲಕ ತಕ್ಷಣ ತಾಯಿ ಮತ್ತು ಮಗುವನ್ನು ಹುಬ್ಬಳ್ಳಿಗೆ ಝಿರೋ ಟ್ರಾಫಿಕ್ನಲ್ಲಿ ಕರೆದೊಯ್ಯಲಾಯಿತು.
ಸಂಬಂಧಿಕರ ಹೇಳಿಕೆ:
ಕುಕನೂರ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ಮಗು ಜನಿಸಿದ್ದು, ಮಗುವಿನ ಕರಳುಗಳೆಲ್ಲ ಹೊರಗೆ ಬಂದಿವೆ. ಅಲ್ಲದೆ ಶಿಶುವಿಗೆ ಕಿಡ್ನಿ ಸಮಸ್ಯೆ ಕೂಡಾ ಇದೆ. ಈ ಕಾರಣಕ್ಕೆ ಮಗು ಉಳಿಸಿಕೊಳ್ಳಲು ಕೊಪ್ಪಳ ವೈದ್ಯರು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಆಪರೇಷನ್ ಅವಶ್ಯವಿರುವ ಹಿನ್ನೆಲೆ ಕೊಪ್ಪಳ ಜಿಲ್ಲಾ ಆಸ್ಪತ್ರೆ ವೈದ್ಯರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಿದರು. ಕೂಡಲೇ ಆಂಬ್ಯುಲೆನ್ಸ್ ಚಾಲಕರು ಐದು ಆಂಬುಲೆನ್ಸಗಳನ್ನು ರೆಡಿ ಮಾಡಿಕೊಂಡು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ನವಜಾತ ಶಿಶು ಪ್ರಾಣ ಉಳಿಸಲು ಪೊಲೀಸರು ಈ ಕೆಲಸಕ್ಕೆ ಸಾಥ್ ನೀಡಿದ್ದಾರೆ. ಕೊಪ್ಪಳದಿಂದ ಹುಬ್ಬಳ್ಳಿ ಸುಮಾರು 110 ಕಿಲೋ ಮೀಟರ್ ಇದೆ. ಅದಕ್ಕಾಗಿ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿ ನವಜಾತ ಶಿಶುವನ್ನು ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ.

