ಅಚ್ಚುಕಟ್ಟು ಪ್ರದೇಶದ ಕೊನೆಯ ರೈತನಿಗೂ ನೀರು ಒದಗಿಸುವ ಸುವರ್ಣ ಮಾರ್ಗದ ಸಹಭಾಗಿತ್ವ  

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಲ ಸಂಕಷ್ಟದ ಸಂದರ್ಭದಲ್ಲಿ ಅಚ್ಚುಕಟ್ಟು ಪ್ರದೇಶದ ಕೊನೆಯ ರೈತನಿಗೂ ನೀರನ್ನು ಒದಗಿಸುವ ಸುವರ್ಣ ಮಾರ್ಗವಾದ ಸಹಭಾಗಿತ್ವದ ನೀರಾವರಿ ನಿರ್ವಹಣೆ ಪದ್ಧತಿಯನ್ನು ಅನುಷ್ಠಾನಗೊಳಿಸುವಲ್ಲಿ ಧಾರವಾಡ ಜಲ ಮತ್ತು ನಿಲ ನಿರ್ವಹಣೆ (ವಾಲ್ಮಿ) ಸಂಸ್ಥೆ ಯಶಸ್ಸನ್ನು ಸಾಧಿಸಿದೆ.

ರಾಷ್ಟ್ರೀಯ ಜಲ ನೀತಿ, ಜಲ ಆಯೋಗ, ಜಲ ಶಕ್ತಿ ಮಂತ್ರಾಲಯ, ವಿಶ್ವಬ್ಯಾಂಕುಗಳಿಂದ ಅನುಮೋದಿತ ಜಾಗತಿಕ ಪರಿಕಲ್ಪನೆಯಾದ ಸಹಭಾಗಿತ್ವದ ನೀರಾವರಿ ನಿರ್ವಹಣಾ ಪದ್ಧತಿಯ ತತ್ವ – ಸಮರ್ಥ, ಆರ್ಥಿಕ ಹಾಗೂ ಸುಸ್ಥಿರ ನೀರು ನಿರ್ವಹಣೆಯಾಗಿರುತ್ತದೆ. ಈ ಪದ್ಧತಿಯು ನೀರಿನ ಸಮರ್ಥ ಬಳಕೆ, ಕೃಷಿ ಹಾಗೂ ಆರ್ಥಿಕ ಅಭಿವೃದ್ಧಿಗೆ ಸುವರ್ಣಾವಕಾಶವಾಗಿದೆ.

- Advertisement - 

ಕರ್ನಾಟಕ ನೀರಾವರಿ ಅಧಿನಿಯಮ – 1965 (2000 ತಿದ್ದುಪಡಿ) ಅಡಿಯಲ್ಲಿ ಅನುμÁ್ಠನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಪದ್ಧತಿ ಅಡಿಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದೆ. ಇದೀಗ, ನೀರು ಬಳಕೆದಾರರ ಸಹಕಾರ ಸಂಘಗಳು ಸುವರ್ಣ ಮಹೋತ್ಸವ ಆಚರಣೆ ಮಾಡಿಕೊಳ್ಳುವ ಸುಸಂದರ್ಭದಲ್ಲಿ ಕೂಡಾ ಕೆಲವು ತಾಂತ್ರಿಕ, ಸಂಘಟನಾತ್ಮಕ, ಆಡಳಿತಾತ್ಮಕ, ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದುದನ್ನು ಮನಗಂಡು ವಾಲ್ಮಿ ಸಂಸ್ಥೆಯು ಕರ್ನಾಟಕ ರಾಜ್ಯಾದ್ಯಂತ ಜಲ ಜಾಗೃತಿ, ಜಲಾಂದೋಲನಗಳನ್ನು ಹಮ್ಮಿಕೊಂಡು ರೈತರ ಸಹಭಾಗಿತ್ವ ಯಶಸ್ವಿಗೊಳಿಸುವಲ್ಲಿ ಮಹತ್ತರ ಕಾರ್ಯ ನಿರ್ವಹಿಸುತ್ತಿದೆ.

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯು ಕಳೆದ ಐದು ವರ್ಷಗಳಲ್ಲಿ ನವೀನ ಪ್ರಯೋಗಗಳನ್ನು ಕೈಕೊಂಡು ತರಬೇತಿ, ಸಂಶೋಧನೆ, ಪ್ರಾತ್ಯಕ್ಷಿಕೆಗಳು ಹಾಗೂ ಪ್ರಚಾರ ಕಾರ್ಯಕ್ರಮಗಳ ಮೂಲಕ ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ ಮತ್ತು ಪುನಶ್ವೇತನದಲ್ಲಿ ತೊಡಗಿಸಿಕೊಂಡಿದ್ದು, ಪ್ರಯತ್ನಗಳು ಯಶಸ್ವಿಯಾಗುತ್ತಿವೆ.

- Advertisement - 

ನೀರು ಬಳಕೆದಾರರು ಹಾಗೂ ಇತರೆ ಪಾಲುದಾರರ ಅವಶ್ಯಕತೆಗೆ ಅನುಗುಣವಾಗಿ ವಿಶಿಷ್ಟ ತರಬೇತಿ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ ಆವರಣ, ಒಳಾಂಗಣ, ಹೊರಾಂಗಣ, ತರಬೇತಿಗಳನ್ನು ನೀಡಲಾಗುತ್ತಿದೆ. ಉಪಗ್ರಹ ಆಧಾರಿತ ತರಬೇತಿ, ಸಂಶೋಧನೆ, ಪ್ರಾತ್ಯಕ್ಷಿಕೆಗಳು ಹಾಗೂ ಪ್ರಚಾರ ಮೂಲಕ ಒಂದೇ ಬಾರಿಗೆ 2000ಕ್ಕೂ ಹೆಚ್ಚು ರೈತರು. ಅಭಿಯಂತರರನ್ನು ತಲುಪಲು ಸಾಧ್ಯವಾಗಿದೆ.

ರೈತರಿಗಾಗಿ ವಿಶೇಷ ಕಾರ್ಯಕ್ರಮಗಳ ಅನುಷ್ಠಾನ :
ಸಾವಿರಾರು ರೈತರಿಗೆ ದೂರದರ್ಶನದಲ್ಲಿ ನೇರ ಫೆÇೀನ್ ಇನ್ ಕಾರ್ಯಕ್ರಮ ಹಾಗೂ ಆಕಾಶವಾಣಿಯ ಜಲ-ನೆಲ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾಹಿತಿ ನೀಡಲಾಗಿದೆ. ಹನಿ ನೀರಾವರಿಯ ಮಹತ್ವ, ತಾಂತ್ರಿಕ ವಿನ್ಯಾಸ, ನೀರು ಬಳಕೆದಾರರ ಸಂಘಗಳ ಮಹತ್ವ, ಬೆಳೆ ಪದ್ಧತಿ ಇತ್ಯಾದಿ ವಿಷಯಗಳ ಬಗ್ಗೆ ಪರಿಣಾಮಕಾರಿಯಾಗಿ ಹೆಚ್ಚಿನ ಸಂಖ್ಯೆಯ ರೈತರನ್ನು ತಲುಪಲು ಬೀದಿ ನಾಟಕ, ಒಂದು ಉತ್ತಮವಾದ ಮಾರ್ಗವೆಂದು ಪರಿಗಣಿಸಿ “ಹನಿ ಹನಿ ಜಲ ಕೃಷಿಗೆ ಬಲ” ಎಂಬ ಬೀದಿ ನಾಟಕವನ್ನು ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ.

ಹುನಗುಂದ ತಾಲೂಕಿನ ರಾಮಥಾಳ ಮತ್ತು ಮುಂಡರಗಿ ತಾಲೂಕಿನ ಸಿಂಗಟಾಲೂರ ಸಮುದಾಯ ಆಧಾರಿತ ಸೂಕ್ಷ್ಮ ನೀರಾವರಿ ಯೋಜನೆಗಳು ಏಷಿಯಾ ಖಂಡದಲ್ಲಿ ದೊಡ್ಡ ಸೂಕ್ಷ್ಮ ನೀರಾವರಿ ಯೋಜನೆಗಳಾಗಿವೆ. ಈ ಯೋಜನೆಯಲ್ಲಿ ನೋಡಿ ಕಲಿ ಮಾಡಿ ತಿಳಿಎಂಬ ಪ್ರಾತ್ಯಕ್ಷಿಕೆಯ ಮೂಲ ತತ್ವದನ್ವಯ ಆಧುನಿಕ ನೀರಾವರಿ ಮತ್ತು ಬೆಳೆ ತಂತ್ರಜ್ಞಾನವನ್ನು ಪ್ರಚುರ ಪಡಿಸಲು ವಿವಿಧ ಗ್ರಾಮಗಳಲ್ಲಿ ಕ್ಷೇತ್ರ ಪ್ರಾತ್ಯಕ್ಷಿಕೆಯನ್ನು ಕೈಕೊಂಡು ನೀರಾವರಿ ಯೋಜನೆಯ ಸಫಲತೆ ಕುರಿತು ಯಶಸ್ವಿಯಾಗಿ ಪ್ರಯೋಗಗಳನ್ನು ಮಾಡಿದೆ.

ಅಧಿಕಾರಿಗಳು ಹಾಗೂ ನೀರು ಬಳಕೆದಾರರ ಸಮನ್ವಯ :
ಧಾರವಾಡ ಜಿಲ್ಲೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಅನುಷ್ಠಾನಗೊಳಿಸಲು ವಿವಿಧ ಕಾರ್ಯಾಗಾರಗಳನ್ನು ಸಂಘಟಿಸಿ ಅಧಿಕಾರಿಗಳು ಹಾಗೂ ನೀರು ಬಳಕೆದಾರರ ಸಮನ್ವಯ ಸಾಧಿಸಿ, ಕಾಲುವೆ ಜಾಲದ ಸಮರ್ಪಕ ಅಚ್ಚುಕಟ್ಟಿನ ಕೊನೆಯ ಭಾಗದ ರೈತರಿಗೆ ನೀರು ತಲಪುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಾಲ್ಮಿ ಪ್ರಯತ್ನಗಳಿಂದಾಗಿ ಕ್ಷೇತ್ರ ಮಟ್ಟದಲ್ಲಿ ನೂರಾರು ಹೊಸ ಸಂಘಗಳನ್ನು ರಚಿಸಲಾಗಿದೆ. ನಿಷ್ಕ್ರಿಯ ಸಂಘಗಳನ್ನು ಪುನಃಶ್ವೇತನಗೊಳಿಸಿ ಕಾಲುವೆ ನೀರಿನ ಹರಿವು ವಿಸ್ತಾರಗೊಂಡು ಆಚ್ಚುಕಟ್ಟು ಪ್ರದೇಶದ ನೀರಾವರಿ ಕ್ಷೇತ್ರ ಹೆಚ್ಚಾಗಿದೆ. ಸಂಘಗಳ ಕಾರ್ಯಾಚರಣೆಯಲ್ಲಿ ಗುಣಾತ್ಮಕ ಬದಲಾವಣೆ ಕಂಡು ಬಂದಿದೆ. ನೀರಿನ ಶುಲ್ಕ ಸಂಗ್ರಹಣೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

ಸಹಭಾಗಿತ್ವ ನೀರಾವರಿ ಪದ್ಧತಿ ಕುರಿತಂತೆ ಇಲಾಖೆಯ ಅಭಿಯಂತರರುಗಳಲ್ಲಿ ಕೌಶಲ್ಯ ವೃದ್ಧಿಯಾಗಿದೆ. ರಾಜ್ಯದಲ್ಲಿ ಸಹಭಾಗಿತ್ವ ನೀರಾವರಿ ಪದ್ಧತಿಯ ಸಮಗ್ರ ಅನುಷ್ಠಾನಕ್ಕಾಗಿ ವಾಲ್ಮೀ ಸಂಸ್ಥೆಯು ಸಲ್ಲಿಸಿದ ನೀತಿ ನಿರೂಪಕ ಪ್ರಸ್ತಾವನೆಗಳು ಸರ್ಕಾರದ ಮಟ್ಟದಲ್ಲಿ ಸ್ವೀಕಾರಗೊಂಡು ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಕಂಡು ಬಂದಿದೆ.

ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳ ಮನ್ನಣೆ :
ಸಂಸ್ಥೆಯ ವಿವಿಧ ಆವಿಷ್ಕರಿ ಕಾರ್ಯತಂತ್ರಗಳಿಂದ ಕರ್ನಾಟಕದ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಸಹಭಾಗಿತ್ವದ ನೀರಾವರಿ ಪದ್ಧತಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಕೊಂಡ ಕ್ರಮಗಳನ್ನು ಗುರುತಿಸಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ನವದೆಹಲಿಯ ಕೇಂದ್ರ ಸರ್ಕಾರದ ಜಲ ಶಕ್ತಿ ಮಂತ್ರಾಲಯದಿಂದ ಜಲ ಪ್ರಹರಿ ಸಮಾನ – 2019”,  ನವದೆಹಲಿಯ ಕೇಂದ್ರ ಸರ್ಕಾರದ ನೀರಾವರಿ ಮತ್ತು ವಿದ್ಯುತ್ ಮಂಡಳಿಯಿಂದ ಸಿ.ಬಿ.ಐ.ಪಿ  ಪ್ರಶಸ್ತಿ – 2022”,   ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ನೀರಾವರಿ ಮತ್ತು ಚರಂಡಿ ಆಯೋಗ (ಐ.ಸಿ.ಐ.ಡಿ)ವು ಕೊಡ ಮಾಡುವ “WಚಿಣSಚಿve ಪ್ರಶಸ್ತಿ – 2024” ಯನ್ನು ಪಡೆದುಕೊಂಡಿದೆ.

ನೀರಿನ ಸಮರ್ಥ ಬಳಕೆ, ಕೃಷಿ ಹಾಗೂ ಆರ್ಥಿಕ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಸ್ಥಾಪಿಸುವುದರ ಮೂಲಕ ನವೀನ ತಾಂತ್ರೀಕತೆಗಳನ್ನು ಅಳವಡಿಸಿಕೊಂಡು ಸಹಭಾಗಿತ್ವದ ನೀರಾವರಿ ನಿರ್ವಹಣಾ ಪದ್ಧತಿಯ ಯಶಸ್ಸಿನ ಹಾದಿಯಲ್ಲಿ ವಾಲ್ಮಿ ಸಂಸ್ಥೆಯು ಮೈಲಿಗಲ್ಲನ್ನೇ ನಿರ್ಮಿಸಿದೆ.

 

Share This Article
error: Content is protected !!
";