ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಕ್ಷದ ಶಕ್ತಿ ನಮ್ಮ ಕಾರ್ಯಕರ್ತರು ಎಂದು ನಾನು ಪದೇ ಪದೇ ಹೇಳುವಾಗ ಅದು ಯಾವುದೇ ಉತ್ಪ್ರೇಕ್ಷೆ ಅಲ್ಲ. ಮತ್ತೆ ಇವತ್ತು ಇದಕ್ಕೊಂದು ಉದಾಹರಣೆ ಸಿಕ್ಕಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದ್ದಾರೆ.
ತನಗಿದ್ದ MNC ಕಂಪನಿಯಲ್ಲಿ ಕೆಲಸ ಬಿಟ್ಟು, ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತ ಪಕ್ಷದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಮೈಸೂರಿನ ಶ್ರೀ ಮಂಜುನಾಥ್.
ಸ್ವಭಾಷಾ, ಸ್ವ ಭೂಷ ಹಾಗೆಯೇ “ಸ್ವ ಆಹಾರ”, ಎಂಬ ಮೋದಿಜಿಯ ಕರೆಗೆ ಓಗೊಟ್ಟ ಸ್ನೇಹಿತರ ಪ್ರೀತಿಯ ಮಂಜು, ಮೈಸೂರಿನ ಜಯಲಕ್ಷ್ಮಿಪುರದಲ್ಲಿ ಮೈಸೂರು ಕಾಫಿ ಬಾರ್ ಎಂಬ ಹೋಟೆಲ್ ಆರಂಭಿಸಿ ತಾನು ಸದಾ ಪಕ್ಷದ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ಸಿಟಿ ರವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಆಡಳಿತದ ನೀತಿ ಖಂಡಿಸಿ ನಡೆಯುತ್ತಿರುವ ಜನಾಕ್ರೋಶ ಯಾತ್ರೆಗೆ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತನ ಹೋಟೆಲಿಗೆ ಭೇಟಿಕೊಟ್ಟು ಒಂದಷ್ಟು ಕ್ಷಣ ಕಳೆದು, ಸ್ಥಳೀಯ ಕಾರ್ಯಕರ್ತರೊಂದಿಗೆ ಹೋಟೆಲ್ ನಲ್ಲಿ ಬೆಳಗ್ಗಿನ ಉಪಹಾರ ಸವಿದೆ ಎಂದು ರವಿ ಅವರು ಹೆಮ್ಮೆಯಿಂದ ಹೇಳಿದ್ದಾರೆ.