ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಕಾರಣದ ಇಚ್ಚಾಶಕ್ತಿ ಅರಿತಿರುವ ಕಾರ್ಯಕರ್ತರೇ ರಾಜಕಾರಣದ ಶಕ್ತಿ. ಪ್ರಭುತ್ವದ ರಾಜಕಾರಣದ ಮುನ್ನೋಟಕ್ಕೆ ಕಾರ್ಯಕರ್ತರ ಸಂಘಟನೆ ಮಹತ್ವದ ಪಾತ್ರವಹಿಸುತ್ತದೆ. ಚುನಾವಣೆ ರಾಜಕಾರಣದಲ್ಲಿ ಸತತವಾಗಿ ಗೆಲುವು ಸಾಧಿಸಿಕೊಂಡು ಸಾಮಾಜಿಕವಾಗಿ ಬೆಳೆದಿರುವ ಬಲಾಢ್ಯ ನಾಯಕರ ಶಕ್ತಿಯೇ ಕಾರ್ಯಕರ್ತರ ಪ್ರಾಬಲ್ಯ.
ರಾಜಕೀಯ ವ್ಯವಸ್ಥೆಯಲ್ಲಿ ಮುಖಂಡರಾಗಿ ಹಾಗೂ ಜನಪ್ರತಿನಿಧಿಗಳಾಗಿ ಬೆಳೆದುಬಂದಿರಲು ಕಾರ್ಯಕರ್ತರೊಂದಿಗಿನ ಪ್ರಾಮಾಣಿಕ ನಡುವಳಿಕೆಯೇ ಒಂದು ಮಹತ್ವದ ಬೆಳವಣಿಗೆ. ಅಧಿಕಾರಕ್ಕೆ ಏರಿದ ಜನಪ್ರತಿನಿಧಿಗಳು ಹಾಗೂ ಮುಖಂಡರುಗಳು ಕಾರ್ಯಕರ್ತರ ಪರವಾಗಿ ಆಡಳಿತದಲ್ಲಿ ಒಂದಿಷ್ಟು ಸಣ್ಣಪುಟ್ಟ ಅವಕಾಶವನ್ನು ಕಲ್ಪಿಸಿದರೆ ಕಾರ್ಯಕರ್ತರ ರಾಜಕೀಯ ಜೀವನ ಸಾರ್ಥಕವಾಗುತ್ತದೆ.
ರಾಜಕಾರಣದಲ್ಲಿ ಸ್ವಾರ್ಥವು ಹೆಚ್ಚಾಗಿ ಕಾರ್ಯಕರ್ತರ ಹಾಗೂ ಜನಪ್ರತಿನಿಧಿಗಳ ಒಡಂಬಡಿಕೆಯಲ್ಲಿ ಪ್ರಾಮಾಣಿಕತೆ ಮಾಯವಾಗುತ್ತಿದೆ ಮನುಷ್ಯ ಮನುಷ್ಯರ ನಡುವಿನ ಅಸಹನೆ ಹಾಗೂ ಅಸೂಯೆ ಒಡನಾಟ ಜಾಸ್ತಿಯಾಗಿ ಮೋಸ ಕುತಂತ್ರಕ್ಕೆ ಕಾರ್ಯಕರ್ತರು ಬಲಿಯಾಗಿ ಅವಕಾಶ ವಂಚಿತರಾಗಿ ಜೀವನದ ಸಾರ್ಥಕತೆ ಸಮಯವನ್ನು ವ್ಯರ್ಥ ಮಾಡಿಕೊಂಡಿದ್ದಾರೆ. ಈ ಎಲ್ಲಾ ಸೂಕ್ಷ್ಮತೆಯ ವಿಚಾರದಲ್ಲಿ ಪ್ರಾಮಾಣಿಕ ಮನಸ್ಥಿತಿಯ ವ್ಯಕ್ತಿಗಳು ರಾಜಕಾರಣದಿಂದ ಹಿಂದೆ ಸರಿಯುತ್ತಿದ್ದಾರೆ.
ಉತ್ತಮ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ರಾಜಕೀಯ ಕ್ಷೇತ್ರವನ್ನು ಉತ್ತಮ ಸಂದೇಶದಲ್ಲಿ ಬೆಳೆಸಬೇಕಿದೆ ಎಂದು ಕಾಂಗ್ರೆಸ್ ಮುಖಂಡ ರಘು ಗೌಡ ತಿಳಿಸಿದ್ದಾರೆ.