ಹೊಳಲ್ಕೆರೆ, ಅಮೃತಾಪುರ ನಿಲ್ದಾಣಗಳಲ್ಲಿ ಪ್ಯಾಸೆಂಜರ್ ಟ್ರೈನ್‌ ನಿಲುಗಡೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೊಸಪೇಟೆ-ಬೆಂಗಳೂರು ಪ್ಯಾಸೆಂಜರ್ ಟ್ರೈನ್‌ಗೆ ಹೊಳಲ್ಕೆರೆ ಹಾಗೂ ಅಮೃತಾಪುರ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.

     ಬೆಂಗಳೂರು-ಹೊಸಪೇಟೆ-ಬೆಂಗಳೂರು ನಡುವೆ ಹೊಸದುರ್ಗ-ಹೊಳಲ್ಕೆರೆ-ಚಿಕ್ಕಜಾಜೂರು-ಚಿತ್ರದುರ್ಗ-ಚಳ್ಳಕೆರೆ -ಹೊಸಪೇಟೆವರೆಗೆ ಸಂಚರಿಸಲಿರುವ ೦೬೨೪೩/೦೬೨೪೪ ರೈಲಿಗೆ ಹೊಳಲ್ಕೆರೆ ಹಾಗೂ ಅಮೃತಾಪುರ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆ ನೀಡುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದ್ದರು, ಸಾರ್ವಜನಿಕರ ಹಿತಾಸಕ್ತಿಯನ್ನು ಗಮನಿಸಿ ರೈಲ್ವೆ ಸಚಿವರ ಗಮನ ಸೆಳೆದ ಸಂಸದ ಗೋವಿಂದ ಎಂ.ಕಾರಜೋಳರವರು ಈ ಎರಡೂ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆ ಒದಗಿಸಲು ಯಶಸ್ವಿಯಾಗಿದ್ದಾರೆ.

ಹೊಸಪೇಟೆ-ಬೆಂಗಳೂರಿಗೆ ಸಂಚರಿಸಲಿರುವ ಈ ಟ್ರೈನಿಗೆ ಈ ಕೆಳಗಿನಂತೆ ನಿಲುಗಡೆ ಒದಗಿಸಲಾಗಿದೆ.
ಹೊಳಲ್ಕೆರೆ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ — ಬೆಳಿಗ್ಗೆ ೦೯.೫೭/೦೯.೫೮

ಸಂಜೆ ೦೫.೨೩/೦೫.೨೪, ಅಮೃತಾಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಬೆಳಿಗ್ಗೆ ೧೦.೩೦/೧೦.೩೧, ಸಂಜೆ ೦೪.೫೦/೦೪.೫೧.
ಮಾನ್ಯ ಸಂಸದರಾದ ಗೋವಿಂದ ಎಂ.ಕಾರಜೋಳರವರು ದಿನಾಂಕ ೧೮.೦೪.೨೦೨೫ ರ ಶುಕ್ರವಾರ ಬೆಳಿಗ್ಗೆ ೯.೫೭ ಕ್ಕೆ ಹೊಳಲ್ಕೆರೆ ರೈಲ್ವೆ ನಿಲ್ದಾಣದಲ್ಲಿ ಹಾಗೂ ೧೦.೩೦ ಕ್ಕೆ ಅಮೃತಾಪುರ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಅಧೀಕೃತವಾಗಿ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Share This Article
error: Content is protected !!
";