ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಆ ಸಮಯದಲ್ಲಿ ಬೆಂಗಳೂರಿನಲ್ಲಿ ಐಟಿ ಸೆಕ್ಟರ್ ಉತ್ತಮ ರೀತಿ ಬೆಳವಣಿಗೆಯಲ್ಲಿ ಮುನ್ನೆಲೆಯಲ್ಲಿತ್ತು. ದುರದೃಷ್ಟವಶಾತ್ ಆ ಒಂದು ಎರಡು ಮೂರು ವರ್ಷಗಳ ಕಾಲ ದೊಡ್ಡ ಪ್ರಮಾಣದಲ್ಲಿ ಭೀಕರ ಬರಗಾಲ ರಾಜ್ಯದಲ್ಲಿ ಆವರಿಸಿಕೊಂಡಿತ್ತು. ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಸಿಗದಂತ ಕೆಟ್ಟ ವಾತಾವರಣ ಸೃಷ್ಟಿಯಾಗಿತ್ತು.
ಈ ಸಂದರ್ಭಕ್ಕೆ ಸರಿಯಾಗಿ ಕನ್ನಡ ಚಿತ್ರರಂಗದ ಜನಪ್ರಿಯ ನಟರಾದ ಡಾ. ರಾಜಕುಮಾರ್ ಅವರು ಅವರ ಹುಟ್ಟೂರಾದ ಗಾಜನೂರಿಗೆ ಹೋಗಿದ್ದರು. ಈ ವಿಚಾರ ತಿಳಿದುಕೊಂಡ ವೀರಪ್ಪನ್ ರಾಜಕುಮಾರ್ ಅವರನ್ನು ಅಪಹರಿಸಿ ತಮಿಳುನಾಡು ಹಾಗೂ ಕರ್ನಾಟಕ ಗಡಿ ಪ್ರದೇಶದಲ್ಲಿ ಹಬ್ಬಿರುವ ಕಾಡಿಗೆ ಕರೆದೊಯ್ದಿದ್ದನು.
ಈ ವಿಚಾರದಲ್ಲಿ ಕರ್ನಾಟಕ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಕೋಲಾಹಲದ ಕಿಚ್ಚು ಹೆಚ್ಚಿತ್ತು ಈ ಸುದ್ದಿ ಎರಡು ರಾಜ್ಯಗಳ ಜನರ ನಡುವಿನ ಸಾಮರಸ್ಯಕ್ಕೆ ದುಷ್ಪರಿಣಾಮ ಬೀರಬಹುದು ಎಂಬ ಸಾಮಾಜಿಕ ಕಳಕಳಿಯಲ್ಲಿ ಈ ವಿಚಾರವನ್ನು ಸೂಕ್ಷ್ಮವಾಗಿ ತೆಗೆದುಕೊಂಡ ಮುಖ್ಯಮಂತ್ರಿ ಕೃಷ್ಣ ಅವರು ಬಹಳಷ್ಟು ತಾಳ್ಮೆ ವಹಿಸಿ ಜವಾಬ್ದಾರಿಯಿಂದ ಮಾಡಬೇಕಾದನ್ನು ಮಾಡಿ ರಾಜಕುಮಾರ್ ಅವರನ್ನು ಕಾಡಿನಿಂದ ನಾಡಿಗೆ ಕರೆತಂದರು.
ಈ ಮೂಲಕ ಸಂರ್ಘಷಕ್ಕೆ ಅವಕಾಶವಿಲ್ಲದಂತೆ 2 ರಾಜ್ಯಗಳ ಜನತೆಯ ನೆಮ್ಮದಿಗೆ ಕಾರಣರಾದರು. ವೀರಪ್ಪನ್ ರಾಜಕುಮಾರ್ ಅವರನ್ನು ಕಾಡಿನಲ್ಲಿ ಇಟ್ಟುಕೊಂಡಿದ್ದು 108 ದಿನಗಳ ಕಾಲ. ಈ ದಿನಗಳಲ್ಲಿ ಕರ್ನಾಟಕದಲ್ಲಿ ಸೂತಕದ ಛಾಯೆ ಆವರಿಸಿತ್ತು. ಮುಖ್ಯಮಂತ್ರಿ ಕೃಷ್ಣ ಅವರು ಈ 108 ದಿನಗಳ ಕಾಲ ನಿದ್ದೆಯೇ ಮಾಡಿರಲಿಲ್ಲ.
ಕೃಷ್ಣ ಅವರು ಕೆಲವೊಂದು ಸುದ್ದಿಮಾದ್ಯಮಗಳ ಸಂದರ್ಶನಗಳಲ್ಲಿ ಈ ವಿಚಾರ ಹಂಚಿಕೊಂಡಿದ್ದರು. ಈ ಒಂದು ಸುದ್ದಿ ಕೃಷ್ಣ ಅವರ ಭಾವನೆಗಳ ವ್ಯಕ್ತಿತ್ವ ಏನೆಂದು ತಿಳಿದುಬಂದಿದೆ.
ಕಿರಿ ಮಾಹಿತಿ:ರಘು ಗೌಡ

