ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಎ1 ಆರೋಪಿ ಪವಿತ್ರಾ ಗೌಡ ಅವರಿಗೆ ಜಾಮೀನು ಮಂಜೂರಾಗಿದ್ದು ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಂದ ಮಂಗಳವಾರ ಅವರನ್ನು ಬಿಡುಗಡೆ ಮಾಡಲಾಯಿತು.
ಆರೋಪಿ ಪವಿತ್ರಾ ಗೌಡ ಬಿಡುಗಡೆ ಆದ ಕೂಡಲೇ ಅವರ ಸಹೋದರ, ತಾಯಿ ಮತ್ತು ಇತರ ಸಂಬಂಧಿಕರೊಂದಿಗೆ ಜೈಲಿನ ಆವರಣದಿಂದ ಆಚೆ ಬಂದು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಮಾಧ್ಯಮದವರ ಕೆಮೆರಾಗಳು ಹತ್ತಿರ ಬಂದಾಗ ಪವಿತ್ರಾ ತಾಯಿ ಮತ್ತು ಇತರರು ಅವರನ್ನು ಮುಚ್ಚುವ ಪ್ರಯತ್ನ ಮಾಡುವುದು ಒಂದು ಕಡೆಯಾದರೆ ಪವಿತ್ರಾ ಗೌಡ ಮಾಧ್ಯಮದವರೊಂದಿಗೆ ಮಾತನಾಡದೇ ಹಾಗೆ ತೆರಳಿಸಿದರು.

