ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಿಸಿಎಂ ಡಿ.ಕೆ ಶಿವಕುಮಾರ ಅವರೇ, ಪಾಲಿಕೆ ಶಿಕ್ಷಕರಿಗೆ 6 ತಿಂಗಳಿಂದ ಸಂಬಳ ಕೊಟ್ಟಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಪಾಲಿಕೆಯ ಸ್ಮಶಾನ ಸಿಬ್ಬಂದಿಗೆ 8 ತಿಂಗಳಿಂದ ಸಂಬಳ ಕೊಟ್ಟಿಲ್ಲ, ❌ಪಾಲಿಕೆಯ ಕಿರಿಯ ಆರೋಗ್ಯಾಧಿಕರಿಗಳಿಗೆ (JHO) 8 ತಿಂಗಳಿಂದ ಸಂಬಳ ಕೊಟ್ಟಿಲ್ಲ ಎಂದು ಅವರು ದೂರಿದ್ದಾರೆ.
ಮಾತೆತ್ತಿದರೆ ಟನಲ್ ರೋಡು, ಸ್ಕೈ ಡೆಕ್ಕು, ಬ್ರ್ಯಾಂಡ್ ಬೆಂಗಳೂರು ಅಂತ ದೊಡ್ಡ ದೊಡ್ಡ ಮಾತು ಅಡಿ ಬೊಗಳೆ ಬಿಡೋದಿಲ್ಲ ಸ್ವಾಮಿ, ಮೊದಲು ಪಾಲಿಕೆ ನೌಕರರಿಗೆ ಸರಿಯಾಗಿ ಸಂಬಳ ಕೊಡಿ ಎಂದು ಅಶೋಕ್ ತಾಕೀತು ಮಾಡಿದ್ದಾರೆ.
ನಿಮ್ಮ ಘನಂದಾರಿ ಆಡಳಿತದಲ್ಲಿ ದಿನಬೆಳಗಾದರೆ ದಿನಪತ್ರಿಕೆಗಳಲ್ಲಿ , ಟಿವಿಗಳಲ್ಲಿ ಬೆಂಗಳೂರಿನ ಎಡವಟ್ಟುಗಳ ಬಗ್ಗೆ ಒಂದಲ್ಲ ಒಂದು ನಕಾರಾತ್ಮಕ ಸುದ್ದಿ ಬಂದು ಬೆಂಗಳೂರಿನ ಹೆಸರು ಹಾಳಾಗುತ್ತಿದೆ.
ಒಳ್ಳೆಯ ಆಡಳಿತ ಕೊಡೋದಕ್ಕೆ ಆದರೆ ಮುಂದುವರೆಯಿರಿ, ಇಲ್ಲವಾದರೆ ಯಾರಾದರೂ ಸಮರ್ಥರಿಗೆ ದಾರಿ ಮಾಡಿಕೊಡಿ ಎಂದು ಅಶೋಕ್ ಆಗ್ರಹ ಮಾಡಿದ್ದಾರೆ.

