ಪೊಲೀಸರು ದಕ್ಷತೆಯಿಂದ ಕಾರ್ಯ ಮಾಡಿದರೆ ಸಮಾಜದಲ್ಲಿ ಶಾಂತಿ: ಶಾಸಕ ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಸರ್ಕಾರ ಮತ್ತು ಗೃಹ ಇಲಾಖೆಯ ಖ್ಯಾತಿಗೆ ಚ್ಯುತಿಉಂಟಾಗದಂತೆ ಕರ್ನಾಟಕ ರಾಜ್ಯ ಪೊಲೀಸ್ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಚಿತ್ರದುರ್ಗ ಪೊಲೀಸ್ ಇಲಾಖೆಯೂ ಇದೇ ಹಾದಿಯಲ್ಲಿ ನಡೆದಿದೆ. ಬೇರೆಎಲ್ಲಾ ಇಲಾಖೆಗಿಂತಪೊಲೀಸ್ ಇಲಾಖೆಯ ಜವಾಬ್ದಾರಿ ಹೆಚ್ಚಿದೆ. ಪೊಲೀಸ್ ಇಲಾಖೆಯ ಕಾರ್ಯದಿಂದ ಮಾತ್ರ ಸಮಾಜದಲ್ಲಿ ನೆಮ್ಮದಿ ಸಾಧ್ಯವೆಂದು ಶಾಸಕ
, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು, ಗುರುವಾರ ಗುರುರಾಘವೇಂದ್ರಕಲ್ಯಾಣಮಂಟಪದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ನಮ್ಮ ನಡೆಜಾಗೃತಿಕಡೆ, ಮನೆ, ಮನೆಗೆ ಪೊಲೀಸ್ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಶೇಷವಾಗಿ ವಿಧಾನಸಭಾ ಕ್ಷೇತ್ರದಲ್ಲಿ ಯಾವಭಾಗದಲ್ಲೂ ಅಹಿತಕರ ಘಟನೆ ಉಂಟಾಗದಂತೆ, ಸಮಾಜಘಾತುಕ ಶಕ್ತಿಗಳು ತಲೆಎತ್ತದಂತೆ, ಕಿಡಿಗೇಡಿಗಳು ಯಾವುದೇ ಗಲಭೆ ಉಂಟಾಗದಂತೆ ಪೊಲೀಸ್ ಇಲಾಖೆ ಜಾಗೃತೆವಹಿಸಿದೆ. ಇಲ್ಲಿನ ಪೊಲೀಸರು ಸ್ನೇಹಮಯಿಪೊಲೀಸಾಗಿ ಕಾರ್ಯನಿರ್ವಹಿಸುತ್ತಿದ್ಧಾರೆ.

- Advertisement - 

ಸಾರ್ವಜನಿಕರು ನೀಡುವ ಉತ್ತಮ ಸಹಕಾರದಿಂದ ಮಾತ್ರ ಪೊಲೀಸ್ ಇಲಾಖೆ ತಮ್ಮ ಕಾರ್ಯಸುಗಮವಾಗಿ ಮಾಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಸುತ್ತಮುತ್ತಲು ನಡೆಯುವ ಅನುಮಾನಸ್ಪಂದ ಘಟನೆಗಳ ಬಗ್ಗೆ ಪೊಲೀಸ್ ಇಲಾಖೆಗೆ ತಕ್ಷಣವೆ ಮಾಹಿತಿ ನೀಡಬೇಕು. ನೀವು ನೀಡುವ ಮಾಹಿತಿಯ ಸಹಕಾರದಿಂದ ಪೊಲೀಸರು ಜಾಗೃತರಾಗುತ್ತಾರೆ. ದುರ್ಘಟನೆಗಳನ್ನು ನಿಯಂತ್ರಿಸಲು ಮುಂದಾಗುತ್ತಾರೆ. ಸಾರ್ವಜನಿಕರು ಮತ್ತು ಪೊಲೀಸ್ ನಡುವೆ ವಿಶ್ವಾಸ, ನಂಬಿಕೆ ಹೆಚ್ಚಾದಾಗ ಮಾತ್ರ ಪೊಲೀಸ್ ಇಲಾಖೆ ಕಾರ್ಯಕ್ಕೆ ಹೆಚ್ಚುಗೌರವ ಬರಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಗೃಹಸಚಿವರ ಮಹತ್ತರ ಯೋಜನೆಗಳಲ್ಲಿ ಈ ಕಾರ್ಯಕ್ರಮ ಒಂದಾಗಿದೆ. ಈ ಕಾರ್ಯಕ್ರಮ ಸಹಕಾರದಿಂದ ಪೊಲೀಸ್ ಇಲಾಖೆ ಜನರನ್ನು ತನ್ನತ್ತ ಸೆಳೆಯಲು ಸಾಧ್ಯವಾಗಿದೆ. ಸಾರ್ವಜನಿಕರು ಮತ್ತು ಪೊಲೀಸ್‌ರ ನಡುವೆ ಹೆಚ್ಚು ಸಹಕಾರ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿಶೇಷವಾಗಿ ಜಿಲ್ಲೆಯಾದ್ಯಂತ ಈ ಕಾರ್ಯಕ್ರಮವನ್ನು ನಮ್ಮ ಇಲಾಖೆ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಸಾರ್ವಜನಿಕರು ನಮ್ಮ ಇಲಾಖೆ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ಧಾರಲ್ಲದೆ, ಸ್ವಯಂ ಪ್ರೇರಣೆಯಿಂದ ಭಾಗಿಯಾಗಿ ಇಲಾಖೆ ಬಲವರ್ಧನೆಗೆ ಸಹಕಾರ ನೀಡಿದ್ಧಾರೆ.

- Advertisement - 

ಪ್ರತಿಗ್ರಾಮದಲ್ಲೂ ಪೊಲೀಸ್ ಬೀಟ್ ರಚಿಸಲಾಗಿದೆ. ಮಹಿಳಾ ಕಾನೆಕ್ಟೇಬಲ್‌ಗಳನ್ನು ನೇಮಿಸಿದೆ, ಬಾಲ್ಯವಿವಾಹ, ಪೋಕ್ಸೋ, ಬಲವಂತದ ಬಲತ್ಕಾರ, ಬೆದರಿಕ ಒಡ್ಡಿ ಹಿಂಸೆ ನೀಡುವುದು ಮುಂತಾದ ಕಾನೂನು ಬಾಹಿರಚಟುವಟಿಕೆ ಬಗ್ಗೆ ಬೀಟ್ ವಿಭಾಗದ ಪೊಲೀಸ್ ಮಾಹಿತಿ ಸಂಗ್ರಹಿಸುತ್ತಾರೆ. ಸಾರ್ವಜನಿಕರು ಸಹ ನಿರ್ಭಯದಿಂದ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ನೀವು ನೀಡುವ ಮಾಹಿತಿಯಿಂದ ಅನೇಕ ದುರ್ಘಟನೆಗಳನ್ನು ಪೊಲೀಸರು ನಿಯಂತ್ರಿಸ ಬಹುದು. ಇತ್ತೀಚಿಗೆ ಸಿರಿಗೆರೆ ಬಳಿ ದರೋಡೆಕೋರರು ಹೊಂಚುಹಾಕುತ್ತಿದ್ದ ಬಗ್ಗೆ ಅಲ್ಲಿನ ರೈತನೊಬ್ಬ ಉಪಠಾಣೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ ಕೂಡಲೇ ಅಧಿಕಾರಿಗಳು ತೆರಳಿ ನಾಲ್ವರು ದರೋಡೆಕೋರರು,

ವಾಹನ, ಲಾಂಗ್, ಮಚ್ಚು, ದೊಣ್ಣೆಗಳನ್ನು ವಶಪಡಿಸಿಕೊಂಡು ಅವರನ್ನು ಬಂಧಿಸಲಾಯಿತು. ಸಾರ್ವಜನಿಕರು ಸಹ ಯಾವುದೇ ಸಂದರ್ಭದಲ್ಲಾಗಲಿ ಮಾಹಿತಿ ನೀಡಿ, ನಿಮ್ಮ ಸಹಕಾರದಿಂದ ಪೊಲೀಸ್ ಇಲಾಖೆ ಇನ್ನಷ್ಟು ಚೈತನ್ಯಶಾಲಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇಲಾಖೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದೆ. ಅಧಿಕಾರಿಗಳಿಂದ ಸಮಸ್ಯೆ ಇದ್ದಲ್ಲಿ ಗಮನಕ್ಕೆ ತರುವಂತೆ ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉಪವಿಭಾಗಾದ ಡಿವೈಎಸ್ಪಿ ರಾಜಣ್ಣ, ಎರಡು ದಿನಗಳ ಕಾಲ ಚಳ್ಳಕೆರೆ ಉಪವಿಭಾಗ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲಾ ಕ್ಷೇತ್ರದಿಂದಲೂ ಚುನಾಯಿತ ಜನಪ್ರತಿನಿಧಿಗಳು, ಸಾರ್ವಜನಿಕರು, ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡು ಪೊಲೀಸ್ ಇಲಾಖೆ ಚಟುವಟಿಕೆಗಳ ಬಗ್ಗೆ ಮಾಹಿತಿಪಡೆದಿದ್ಧಾರೆ.

ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಸೇರಿದಂತೆ ಎಲ್ಲಾ ಅಧಿಕಾರಿಗಳು ಪೊಲೀಸ್ ಇಲಾಖೆ ಕಾರ್ಯಕ್ರಮ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸಲು ಅಗತ್ಯವಿರುವ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಯಾವುದೇ ರೀತಿಯ ಸಾರ್ವಜನಿಕರ ಸಮಸ್ಯೆಗಳಿದ್ದಲ್ಲಿ ಇಲಾಖೆ ತ್ವರಿತಗತಿಯಲ್ಲಿ ಸ್ಪಂದಿಸಲಿದೆ. ಜನರೊಂದಿಗೆ ಸದಾ ಇದ್ದು, ಉತ್ತಮ ಕೆಲಸ ಮಾಡುವ ಸಂಕಲ್ಪ ನಮ್ಮದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕರು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಿಸಿ ಕ್ಯಾಮರ ಅಳವಡಿಕೆ, ಬೀಟ್‌ಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ, ಗ್ರಾಮೀಣ ಭಾಗದಲ್ಲೂ ಸಹ ಇಂತಹ ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ಮನವಿ ನೀಡಿದರು. ನಗರಸಭೆ ಅಧ್ಯಕ್ಷೆ ಶಿಲ್ಪಮುರುಳಿ,

ಉಪಾಧ್ಯಕ್ಷ ಕವಿತಾಬೋರಯ್ಯ, ಸದಸ್ಯರಾದ ಸುಜಾತಪಾಲಯ್ಯ, ಸುಮಭರಮಣ್ಣ, ಪಾಲಮ್ಮ, ಪ್ರಶಾಂತ್‌ಕುಮಾರ್, ರಮೇಶ್‌ಗೌಡ, ರಾಘವೇಂದ್ರ, ವೀರಭದ್ರಪ್ಪ, ಇಒ ಶಶಿಧರ, ಗ್ಯಾರಂಟಿಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ವೃತ್ತ ನಿರೀಕ್ಷಕ ಕೆ.ಕುಮಾರ್‌ ಸ್ವಾಗತಿಸಿದರು, ತಳಕು ವೃತ್ತ ನಿರೀಕ್ಷಕ ಹನುಮಂತಪ್ಪ ಸಿರಿಹಳ್ಳಿ ನಿರೂಪಿಸಿ, ವಂದಿಸಿದರು.

 

 

Share This Article
error: Content is protected !!
";