ಚಂದ್ರವಳ್ಳಿ ನ್ಯೂಸ್, ಕಂಪ್ಲಿ:
ಪಾಮ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದ್ದು ಅಪಾರ ಪ್ರಮಾಣದಲ್ಲಿ ಅಡುಗೆ ಎಣ್ಣೆ ಸೋರಿಕೆ ಆಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಲಾಪುರ ಬಳಿ ಶುಕ್ರವಾರ ಜರುಗಿದೆ.
ಸ್ಥಳೀಯ ಜನರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಪಾಮ್ ಆಯಿಲ್ ಸಂಗ್ರಹಿಸಲು ಸ್ಥಳಕ್ಕೆ ಮುಗಿಬಿದ್ದಿದ್ದಾರೆ.
ಬಕೆಟ್, ಕ್ಯಾನ್ಗಳು ಮತ್ತು ವಿವಿಧ ಪಾತ್ರೆಗಳನ್ನು ಹಿಡಿದು ಬಂದು ಸೋರಿಕೆ ಆಗುತ್ತಿದ್ದ ಎಣ್ಣೆ(ತೈಲ)ಯನ್ನು ತುಂಬಿಸಿಕೊಂಡಿದ್ದಾರೆ. ಅಪಘಾತದಲ್ಲಿ ಅದೃಷ್ಟವಶಾತ್ ಲಾರಿಯ ಚಾಲಕ ಮತ್ತು ಕ್ಲೀನರ್ಪ್ರಾಣಾಪಾಯದಿಂದ ಪಾರಾಗಿದ್ದು ಕಂಪ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

