ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ತಾಲ್ಲೂಕು ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿ ಚನಗಪ್ಪನಪಾಳ್ಯ ಬಾರೆ ಹತ್ತಿರ ಅಕ್ಟೋಬರ್ ೧೯ರಂದು ಮಧ್ಯಾಹ್ನ ೧೨.೩೦ರ ಸಮಯದಲ್ಲಿ ನವಜಾತ ಶಿಶುವೊಂದು ದೊರೆತಿದ್ದು, ಪೋಷಕರು ಯಾರೆಂದು ತಿಳಿದು ಬಂದಿರುವುದಿಲ್ಲ.
ನವಜಾತ ಶಿಶುವು ಸಾಧಾರಣ ಮೈಕಟ್ಟು, ಕಂದು ಮೈಬಣ್ಣ, ದುಂಡು ಮುಖ ಹೊಂದಿದ್ದು, ಪೋಷಕರ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ದೂ.ವಾ.ಸಂ.೯೪೮೦೮೦೨೯೫೩, ೯೧೧೦೮೫೭೪೭೨, ೦೮೧೬-೨೨೪೧೦೩೬/ ೨೯೫೬೬೯೯ನ್ನು ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮನವಿ ಮಾಡಿದ್ದಾರೆ.