ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸಲು ಕುಂಭಕರ್ಣನ ವೇಷದಲ್ಲಿ ಮನವಿ ಸಲ್ಲಿಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕ್ಯಾಲೆಂಡರ್ ವರ್ಷದ ಮೊದಲು ದಿನ ಕುಂಭಕರ್ಣ ವೇಷಧಾರಿಯೊಬ್ಬರು
  ಬಂದು ಜಿಲ್ಲಾ ಉಸ್ತುವಾರಿ ಕೆ. ಹೆಚ್ ಮುನಿಯಪ್ಪ ಹಾಗು ಜಿಲ್ಲಾಧಿಕಾರಿ ಶಿವಶಂಕರ್ ರವರಿಗೆ ಸಮಸ್ಯೆಗಳನ್ನು ಬಗೆಹರಿಸುವಂತೆ  ಮನವಿ ಸಲ್ಲಿಸಿದರು.

 ಜಿಲ್ಲಾಡಳಿತ ನಿದ್ರೆಗೆ ಜಾರಿದೆ ಎಂದು ತಿಳಿದು ಇದನ್ನು ಬಡಿದು ಎಬ್ಬಿಸಲು ದೊಡ್ಡಬಳ್ಳಾಪುರ ತಾಲ್ಲೂಕಿನ ಯುವ ಸಂಚಲನ ವಿನೂತನ ರೀತಿಯಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು. ಕುಂಭಕರ್ಣ ವೇಷಧಾರಿ ಯಾಗಿ ತಾಲ್ಲೂಕು ಹಾಗು ಜಿಲ್ಲಾಡಳಿತ ಯಂತ್ರವನ್ನು ಚಾಲನೆ ನೀಡುವ ಸಲುವಾಗಿ ಕುಂಭಕರ್ಣ ವೇಷಧಾರಿಯಾಗಿ ಬಂದು ಮನವಿ ಸಲ್ಲಿಸಲಾಯಿತು.

ತಾಲ್ಲೂಕಿನ ಜ್ವಲಂತ ಸಮಸ್ಯೆ ಯಾದ  ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಬೆಂಗಳೂರಿನಿಂದ ದೊಡ್ಡಬಳ್ಳಾಪುರ ಉಪ ವಿಭಾಗಕ್ಕೆ ಸ್ಥಳಾಂತರಿಸುವಂತೆ    ಮನವಿ ಕೊಟ್ಟು ಸುಮಾರು ತಿಂಗಳುಗಳು ಕಳೆದರು ಇಲ್ಲಿಯ ವರೆವಿಗೂ ಸ್ಥಳಾಂತರವಾಗಿಲ್ಲ  ಹಾಗು ಶಾಲೆಗಳ ಆವರಣದಲ್ಲಿ ಅಕ್ಕ ಪಕ್ಕದಲ್ಲಿಯೇ ತಂಬಾಕು ಉತ್ಪನ್ನಗಳ ಮಾರಾಟ ನೆಡೆಯುತ್ತಿದ್ದರು ಆದರ ಬಗ್ಗೆ ಕ್ರಮಕ್ಕೆ ಮುಂದಾಗಬೇಕು‌ನಗರ ಸಭೆಯ ತ್ಯಾಜ್ಯ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ.

ನ್ಯಾಯಬೆಲೆ ಅಂಗಡಿಗಳು ಸರಿಯಾಗಿ ಬಾಗಿಲು ತೆರೆಯುತ್ತಿಲ್ಲ ಕೂಲಿ ಕಾರ್ಮಿಕರು ಒಂದು ದಿನದ ಕೊಲಿ ಬಿಟ್ಟು ಬಂದು ದಿನಗಟ್ಟಲೆ ಕಾದು ಕುಳಿತುಕೊಳ್ಳಿವ ಪರಸ್ಥಿತಿ ಎದುರಾಗಿದೆ.ಆಹಾರ ಮತ್ತು ನಾಗರೀಕ ಸಚಿವರ ಜಿಲ್ಲೆಯಲ್ಲಿಯೇ ಈ ಪರಿಸ್ಥಿತಿ ಇದೆ‌. ಅದ್ದರಿಂದ.ಜಿಲ್ಲಾಡಳಿತ ಹಾಗು ತಾಲ್ಲೂಕು ಅಡಳಿತ  ಕುಂಭಕರ್ಣ ನಿದ್ದೆ ಯಲ್ಲಿದೆ. ಆದ್ದಕಾಗಿ ಈ ಹೂಸ ಕ್ಯಾಲೆಂಡರ್ ಬದಲಾವಣೆ ಮಾಡುವಂತೆ ಕಛೇರಿಯ ಕೆಲಸಗಳು ಹೂಸ ಬದಲಾವಣೆಯಾಗಿ ಪರಿಹಾರ ಸಿಗಲಿ ಎನ್ನುವುದೇ ಈ ತಂಡದ ಉದ್ದೇಶ.

 ಈ ಸಂದರ್ಭದಲ್ಲಿ ಯುವ ಸಂಚಲನ ಚಿದಾನಂದ ಮೂರ್ತಿ ನಾಗದಳ ನಟರಾಜ್ ದಿವಾಕರ್ ನಾಗ್  ವೆಂಕಟೇಶ ಹಾಜರಿದ್ದರು.

 

- Advertisement -  - Advertisement - 
Share This Article
error: Content is protected !!
";