ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಯುವ ಆಪದ್ಮಿತ್ರ ವಿಪತ್ತು ನಿರ್ವಹಣಾ ತರಬೇತಿ ಶಿಬಿರವು ಮಾರ್ಚ್ 4 ರಿಂದ 10 ರವರೆಗೆ 2026 ರಂದು ಬೆಂಗಳೂರಿನ ಡಾ. ಆನಿ ಬೆಸಂಟ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ನಡೆದಿದ್ದು, ಶಿಬಿರಕ್ಕೆ ಮಾರ್ಚ್ 8 ರಂದು ನಡೆದ ಅಂತರ್ ರಾಷ್ಟ್ರ ಮಹಿಳಾ ದಿನಾಚರಣೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ – ಕರ್ನಾಟಕದ ರಾಜ್ಯ ಮುಖ್ಯ ಆಯುಕ್ತರಾದ ಶ್ರೀ ಪಿ.ಜಿ.ಆರ್. ಸಿಂಧಿಯಾ ಅವರು ಭೇಟಿ ನೀಡಿ ಮಹಿಳಾ ಸ್ವಯಂಸೇವಕರಿಗೆ ಶುಭಕೋರಿದರು.
ನಗರದ ಅನಿಬೆಸೆಂಟ್ ಪಾರ್ಕ್ ನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಿ.ಜಿ.ಆರ್ ಸಿಂಧ್ಯಾ ಮಾತನಾಡಿ ಇತ್ತಿಚೆಗೆ ರಾಷ್ಟ್ರೀಯ ಜಾಂಬೂರಿ ಉತ್ತರ ಪ್ರದೇಶದ ಲಕ್ನೋದಲ್ಲಿ ಯಶಸ್ವಿಯಾಗಿ 7 ದಿನಗಳ ಕಾಲ ನಡೆಯಿತು ಎಂದರು.
ಈ ಕಾರ್ಯಕ್ರಮದಲ್ಲಿ ರಾಜ್ಯದ 800 ಮಂದಿ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು, 5೦ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯಪಾಲ ಆನಂದಿ ಬೆಹನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ರಾಜ್ಯದ ಮಕ್ಕಳ ಕ್ರೀಡೆ, ಸಾಂಸ್ಕೃತಿಕವಾಗಿ ಈ ಕಾರ್ಯಕ್ರಮದಲ್ಲಿ ಯಶಸ್ಸುಗಳಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲತಾ ಬಿ.ವಿ, ಎಲ್ಒಸಿ ಮತ್ತು ರಾಜ್ಯ ಕಾರ್ಯಕ್ರಮ ಸಹಾಯಕಿ– YAMS ಚಲ್ಲಯ್ಯ, ಶಿಬಿರ ಕೇಂದ್ರ ಸಂಯೋಜಕ ನಾಗರಾಜ, ಜಿಲ್ಲಾ ಮುಖ್ಯ ಆಯುಕ್ತ ಬೆಂಗಳೂರು ಗ್ರಾಮಾಂತರ ಹಾಗೂ ಸಂತೋಷ್, ಜಿಲ್ಲಾ ನಿರ್ದೇಶಕ ರಾಯಚೂರು (ಮೈ ಭಾರತ) ಉಪಸ್ಥಿತರಿದ್ದು, ಶಿಬಿರಾರ್ಥಿಗಳು ಹಾಜರಿದ್ದರು.

