ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭಾರತ ಸರ್ಕಾರದ ಅಣುಶಕ್ತಿ ಇಲಾಖೆಯ ಅಣುಶಕ್ತಿ ಕೇಂದ್ರೀಯ ವಿದ್ಯಾಲಯ ಕೈಗಾ ಶಾಲೆಯ ಗ್ರಂಥಪಾಲಕಿ ಕೆ.ಆರ್ ಮಹಾಲಕ್ಷ್ಮಿಯವರಿಗೆ ಪಿಹೆಚ್.ಡಿ ಪದವಿ ಲಭ್ಯವಾಗಿದೆ.
ತಾಲೂಕಿನ ಬಿದರಕೆರೆ ಗ್ರಾಮದ ನಿವೃತ್ತ ದ್ವಿತೀಯ ದರ್ಜೆ ಸಹಾಯಕ ರಂಗಣ್ಣ ಹೆಚ್. ಮತ್ತು ಪಾರ್ವತಮ್ಮ ಅವರ ಪುತ್ರಿ ಕೆ.ಆರ್ ಮಹಾಲಕ್ಷ್ಮಿ ಯವರು ಮಂಡಿಸಿದ ರೋಲ್ ಆಫ್ ಅಕಾಡೆಮಿಕ್ ಸೋಷಿಯಲ್ ನೆಟ್ವರ್ಕ್ಸ್ ಇನ್ ಪ್ರಮೋಟಿಂಗ್ ಡಿಸ್ಕವರಿ ಅಂಡ್ ಡಿಸೆಮಿನೇಷನ್ ಆಫ್ ಸ್ಕಾಲರ್ಲಿ ಲಿಟರೇಚರ್: ಆನ್ ಎಕ್ಸೋರೇಟರಿ ಸ್ಟಡಿ ಎಂಬ ವಿಷಯದ ಮಹಾಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾನಿಲಯದ ಪಿಎಚ್.ಡಿ ಪದವಿ ಲಭಿಸಿದೆ.
ಇವರಿಗೆ ತುಮಕೂರು ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಂದ್ರ ಬಾಬುರವರು ಮಾರ್ಗದರ್ಶನರಾಗಿದ್ದರು. ಮಹಾಲಕ್ಷ್ಮಿಯವರ ಸಾಧನೆಗೆ ಗ್ರಾಮಸ್ಥರು, ಕುಟುಂಬಸ್ಥರು ಹಾಗೂ ಸ್ನೇಹಿತರು ಅಭಿನಂದಿಸಿದ್ದಾರೆ.

