ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹನುಮನಕಟ್ಟೆ ಕೆಂಚಾಂಬ ದೇವಸ್ಥಾನದ ಬಳಿ, ಸಾಸಲು ಭೂತಪ್ಪ ದೇವಸ್ಥಾನದ ಬಳಿ ಹಾಗೂ ದುಮ್ಮಿಗೊಲ್ಲರಹಟ್ಟಿ ಜುಂಜಪ್ಪನ ದೇವಸ್ಥಾನದ ಬಳಿ ಯಾತ್ರಿ ನಿವಾಸ ನಿರ್ಮಿಸಲಾಗಿರುತ್ತದೆ. ಪ್ರತಿ ಯಾತ್ರಿ ನಿವಾಸಕ್ಕೆ ತಲಾ ರೂ.25 ಲಕ್ಷ ವೆಚ್ಚ ಭರಿಸಲಾಗಿರುತ್ತದೆ.
ಯಾತ್ರಿ ನಿವಾಸ ಕಟ್ಟಡಗಳನ್ನು ಯಾರಾದರೂ ನಿರ್ವಹಣೆ ಮಾಡಲು ಇಚ್ಚಿಸಿದ್ದಲ್ಲಿ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಚಿತ್ರದುರ್ಗ ಕಚೇರಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿ, ಕೋಟೆ ಸಮೀಪ, ಕಾಮನಬಾವಿ ಬಡಾವಣೆ, ಚಿತ್ರದುರ್ಗ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.