ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಯಾತ್ರಿಕರು

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದೊಡ್ಡಬಳ್ಳಾಪುರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊರಡುವ 29ನೇ ವರ್ಷದ ಪಾದಯಾತ್ರೆಯನ್ನು ಗುರುವಾರ ಆರಂಭಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರಿಕರ ಅನ್ನದಾಸೋಹ ಸೇವಾ ಸಮಿತಿ, ದೊಡ್ಡಬಳ್ಳಾಪುರ ಇವರ ಆಶ್ರಯದಲ್ಲಿ ಆಯೋಜಿಸಲಾದ ಈ ಪಾದಯಾತ್ರೆಗೆ ನಗರದ ಕೊಂಗಾಡಿಯಪ್ಪ ಕಾಲೇಜು ಬಳಿಯ ಬಯಲು ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಕ್ತಿ ಮತ್ತು ಶ್ರದ್ಧೆಯೊಂದಿಗೆ ಪಾದಯಾತ್ರೆಯನ್ನು ಯಾತ್ರಿಗಳು ಆರಂಭಿಸಿದರು.

- Advertisement - 

ಈ ಸಂದರ್ಭದಲ್ಲಿ ಪಾದ ಯಾತ್ರಿಕರ ಸೇವಾರ್ಥವಾಗಿ ದಿನಾಂಕ 05-02-2026 ರಿಂದ 14-02-2026ರವರೆಗೆ ಅನ್ನದಾಸೋಹ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ನಡೆಸಲು ಭಕ್ತಿ ಬಾಗಿಲನ್ನು ತೆರೆಯಲಾಗಿದೆ. ಪಾದಯಾತ್ರೆಯ ಅವಧಿಯಲ್ಲಿ ಪಾದಯಾತ್ರಿಕರಿಗೆ ಅಗತ್ಯವಾದ ಆಹಾರ, ವಿಶ್ರಾಂತಿ ಹಾಗೂ ಸೇವೆಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸೇವಾ ಸಮಿತಿಯ ಪದಾಧಿಕಾರಿಗಳಾದ ಗುರು ಮೂರ್ತಿ, ಬಸವರಾಜು, ಗಣ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದು, ಪಾದಯಾತ್ರೆ ಯಶಸ್ವಿಯಾಗಲೆಂದು ಶುಭ ಹಾರೈಸಿ ಪಾದಯಾತ್ರೆಯು ಭಕ್ತಿ, ಶಿಸ್ತು ಮತ್ತು ಸೇವಾ ಭಾವದೊಂದಿಗೆ ಸಾಗಲಿದ್ದು, ಸಾರ್ವಜನಿಕರು ಹಾಗೂ ಭಕ್ತರು ಈ ಪವಿತ್ರ ಸೇವೆಯಲ್ಲಿ ಕೈ ಜೋಡಿಸಬೇಕೆಂದು ಸಮಿತಿ ಮನವಿ ಮಾಡಿದರು.

- Advertisement - 

Share This Article
error: Content is protected !!
";