ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೇಕ್ ಇನ್ ಇಂಡಿಯಾ ಮೂಲಕ ಭವಿಷ್ಯವನ್ನು ರೂಪಿಸಲಾಗುತ್ತಿದೆ ಎಂದು ಬಿಜೆಪಿ ತಿಳಿಸಿದೆ.
ಭಾರತವು ದೇಶೀಯವಾಗಿ ಅಭಿವೃದ್ಧಿಪಡಿಸಿದ ಪಿನಾಕಾ ರಾಕೆಟ್‌ಗಳನ್ನು ಆರ್ಮೇನಿಯಾಕ್ಕೆ ಪೂರೈಸಲು ಪ್ರಾರಂಭಿಸಿದೆ.
ಪಿನಾಕಾ ಮಲ್ಟಿ ಬ್ಯಾರೆಲ್ ರಾಕೆಟ್ ವ್ಯವಸ್ಥೆಯ ಮೊದಲ ಬ್ಯಾಚ್ ಅನ್ನು ಅರ್ಮೇನಿಯಾಕ್ಕೆ ಕಳುಹಿಸಲಾಗಿದೆ. ಪಿನಾಕಾ ರಾಕೆಟ್ ಲಾಂಚರ್ ಹೆಚ್ಚು ಸಾಮರ್ಥ್ಯದ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದೆ ಎಂದು ಬಿಜೆಪಿ ತಿಳಿಸಿದೆ.