ಹುತಾತ್ಮ ಪಿಎಸ್ಐ ಜಗದೀಶ್ ರವರ ಪುಣ್ಯ ಸ್ಮರಣೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕರ್ತವ್ಯದ ವೇಳೆ ದುಷ್ಟರಿಂದ ಹುತಾತ್ಮರಾದ ಪಿ ಎಸ್ ಐ ಜಗದೀಶ್ ರವರ
,9 ನೇ  ವರ್ಷದ ಪುಣ್ಯ ಸ್ಮರಣೆ ದಿನಾಚರಣೆಯನ್ನು ನಗರದ ಹೊರವಲಯದ ಡಿ ಕ್ರಾಸ್ ಬಳಿಯ ಪಿ ಎಸ್ ಐ ಜಗದೀಶ ವೃತ್ತದಲ್ಲಿ ಆಯೋಜನೆ ಮಾಡಲಾಗಿತ್ತು.

- Advertisement - 

ಕಾರ್ಯಕ್ರಮದಲ್ಲಿ  ಕರವೇ ರಾಜ್ಯ  ಪ್ರದಾನ ಕಾರ್ಯದರ್ಶಿ ರಾಜ ಘಟ್ಟ ರವಿ ಮಾತನಾಡಿ ಗ್ರಾಮೀಣ ಬಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರು ಹಾಗು ಬೇರೆ ರಾಜ್ಯಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಲು ಕಷ್ಟವಾಗಿದೆ ಆದ್ದರಿಂದ  ಉನ್ನತ ಅಧಿಕಾರಿಗಳಿಂದ ಸಹಾಯ ಪಡೆದು ಹುತಾತ್ಮ ಪಿ ಎಸ್ ಐ ಜಗದೀಶ್  ರವರ ಹೆಸರಿನಲ್ಲಿ  ಐ ಎ ಎಸ್  ಐ ಪಿ ಎಸ್ ಹಾಗು  ಕೆ ಪಿ ಎಸ್ ಸಿ  ಶಾಲೆಗಳನ್ನು  ತೆರೆದು ನುರಿತ ಶಿಕ್ಷಕರಿಂದ  ಶಿಕ್ಷಣ ಕೂಡಿಸಲಾಗುವುದು ಎಂದರು.

- Advertisement - 

 ನಂತರ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಇನ್ ಸ್ಪೆಕ್ಟರ್ ಸಾಥಿಕ್ ಪಾಷ ರವರು ಮಾತನಾಡಿ ನಾವು ಅಹಿತರಕರ ಘಟನೆಗಳು ನೆಡೆದ ಸಂದರ್ಭದಲ್ಲಿ ಸಮಾಜದಲ್ಲಿ ತಪ್ಪು ಮಾಡಿದವರ ಮೇಲೆ ಕಠಿಣವಾಗಿ ನೆಡೆದು ಕೊಳ್ಳಬೇಕಾಗುತ್ತದೆ  ಅದರೆ ಅದು ದುರುದ್ದೇಶದಿಂದ ಅಲ್ಲ, ದೊಡ್ಡಬಳ್ಳಾಪುರ ಒಬ್ಬ ಅಧಿಕಾರಿಗೆ ಈ ತರಹದ ಗೌರವ ನೀಡಿತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಪಿಎಸ್ಐ ಜಗದೀಶ್ ರವರ ಒಂಬತ್ತನೆ ಹುತಾತ್ಮ ದಿನಾಚರಣೆ ಅಂಗವಾಗಿ ಪಿಎಸ್ಐ ಕೃಷ್ಣಪ್ಪ,ಎಎಸ್ಐ ಕೃಷ್ಣಮೂರ್ತಿ  ಪೇದೆಗಳಾದ ಪಾಂಡುರಂಗ, ಪ್ರಕಾಶ್ ಹಾಗೂ ಯೋಗಶ್ರೀ ಅವರನ್ನು ಸನ್ಮಾನಿಸಲಾಯಿತು.

- Advertisement - 

ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಶ್ರೀ ವಿದ್ಯಾ ವಿಭಾ ರಾಥೋಡ್  ನಗರ ಸಭಾ ಉಪಾಧ್ಯಕ್ಷ  ರೈಲ್ವೆ ಸ್ಟೇಷನ್ ಮಲ್ಲೇಶ ಹಾಗು ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ ಚಂದ್ರ ಶೇಖರ್ ಹುತಾತ್ಮ  ಪಿ ಎಸ್ ಐ ಜಗದೀಶರವರ  ಮಡದಿ ಮಕ್ಕಳು  ಹಾಗು ಸಾರ್ವಜನಿಕರು ಹಾಜರಿದ್ದರು.

 

Share This Article
error: Content is protected !!
";