ಪಂಜಾಬ್‌ನ ಅದಂಪುರ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತ-ಪಾಕಿಸ್ತಾನ ಕದನವಿರಾಮದ ಬಳಿಕ ಮೇ-13 ರಂದು ಮಂಗಳವಾರ ಬೆಳಗ್ಗೆ ಪಂಜಾಬ್‌ನ ಅದಂಪುರ ವಾಯುನೆಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿ ವಾಯುಪಡೆಯ ಸಿಬ್ಬಂದಿಯಿಂದ ವಸ್ತುಸ್ಥಿತಿಯ ಮಾಹಿತಿ ಪಡೆದಿದ್ದಾರೆ.

ಅಲ್ಲಿನ ಸೈನಿಕರ ಜೊತೆ ಕಾಲ ಕಳೆದು, ಸಂವಾದ ನಡೆಸಿ ಅವರಿಗೆ ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ. ಭಾರತದ ಆಪರೇಷನ್ ಸಿಂಧೂರ್ನಂತರ, ಮೇ 9 ಮತ್ತು 10ರ ಮಧ್ಯರಾತ್ರಿ ಪಾಕಿಸ್ತಾನ ದಾಳಿ ಮಾಡಲು ಪ್ರಯತ್ನಿಸಿದ ವಾಯುಪಡೆಯ ಕೇಂದ್ರಗಳಲ್ಲಿ ಅದಮ್‌ಪುರವೂ ಒಂದು.

ಹೀಗಾಗಿ ಸೈನಿಕರಿಗೆ ಅಭಿನಂದನೆ ತಿಳಿಸಿದ್ದಾರೆ. ಇನ್ನು ಪಂಜಾಬ್​ನ ಆದಂಪುರ ಏರ್​ಬೇಸ್​​ಗೆ ಭೇಟಿ ನೀಡಿ ಸೈನಿಕರೊಂದಿಗೆ ಪ್ರಧಾನಿ ಮೋದಿ ನಡೆಸಿದ್ದ ಸಂವಾದದ ಬಗ್ಗೆ ವಿಡಿಯೋ ಪ್ರಸಾರ ಮಾಡಲಾಗಿದೆ.

 

Share This Article
error: Content is protected !!
";