ಮಕ್ಕಳಿಗೆ ಪಿಸಿವಿ ಲಸಿಕೆ ಹಾಕಿಸಿ, ನ್ಯೂಮೋನಿಯಾ ನಿಯಂತ್ರಿಸಿ-ಡಾ.ಗಿರೀಶ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತಪ್ಪದೇ ನಿಮ್ಮ ಮಕ್ಕಳಿಗೆ ಪಿಸಿವಿ ಲಸಿಕೆ ಹಾಕಿಸಿ ನ್ಯೂಮೋನಿಯಾ ನಿಯಂತ್ರಿಸಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

  ನಗರದ ಮಾರುತಿ ನಗರದ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಜೆ.ಸಿ.ಆರ್ ಬಡಾವಣೆ 7ನೇ ಅಡ್ಡರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಲಸಿಕಾ ಕಾರ್ಯಕ್ರಮದೊಂದಿಗೆ ಸಾನ್ಸ್ ಕಾರ್ಯಕ್ರಮ ಸಾಮಾಜಿಕ ಅರಿವು ಚಟುವಟಿಕೆಗಳ ಮೂಲಕ ನಿಮೋನಿಯಾ ರೋಗ ಪರಿಣಾಮಕಾರಿಯಾಗಿ ನಿಯಂತ್ರಣ ಸಂಬಂಧ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನ್ಯುಮೋನಿಯಾ ಬ್ಯಾಕ್ಟೀರಿಯಾ, ವೈರಲ್ ಅಥವಾ ಫಂಗಲ್ ಸೋಂಕಿನಿಂದ ಉಂಟಾಗುವ ನಿಮ್ಮ ಶ್ವಾಸಕೋಶದಲ್ಲಿ ಉರಿಯೂತ ಮತ್ತು ದ್ರವವಾಗಿದೆ. ಇದು ಉಸಿರಾಡಲು ಕಷ್ಟವಾಗುತ್ತದೆ ಮತ್ತು ಹಳದಿ, ಹಸಿರು ಅಥವಾ ರಕ್ತಸಿಕ್ತ ಲೋಳೆಯೊಂದಿಗೆ ಜ್ವರ ಮತ್ತು ಕೆಮ್ಮ ಉಂಟುಮಾಡಬಹುದು. ಫ್ಲೂ, ಕೋವಿಡ್19 ಮತ್ತು ನ್ಯುಮೋಕೊಕಲ್ ಕಾಯಿಲೆಗಳು ನ್ಯುಮೋನಿಯಾಕ್ಕೆ ಸಾಮಾನ್ಯ ಕಾರಣಗಳಾಗಿವೆ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಪ್ರತಿ ವರ್ಷ ನವೆಂಬರ್ 14ರಂದು ವಿಶ್ವ ನಿಮೋನಿಯಾ ದಿನ ಆಚರಿಸಲಾಗುತ್ತದೆ. ಬಾರಿ ಕಾರ್ಯಕ್ರಮ ಸಾನ್ಸ್ ಕಾರ್ಯಕ್ರಮ ಸಾಮಾಜಿಕ ಅರಿವು ಚಟುವಟಿಕೆಗಳ ಮೂಲಕ ನ್ಯೂಮೋನಿಯಾ ರೋಗ ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಎಂದಾಗಿದೆ
ಸಾರ್ವಜನಿಕರು ಮಕ್ಕಳಲ್ಲಿ ಉಸಿರು ಗಟ್ಟಿವಿಕೆ ಪಕ್ಕೆಲಬು ಸೆಳೆತ ಗಮನಿಸಬೇಕು

ಇಂತಹ ಸ್ಥಿತಿ ಕಂಡಾಗ ತಕ್ಷಣವೇ ಮಕ್ಕಳನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಬಳಿ ಚಿಕಿತ್ಸೆ ಪಡೆಯಬೇಕು. ನಿಮೋನಿಯಾ ರೋಗವು ಸಾಮಾನ್ಯವಾಗಿ ಬರಲು ಕಾರಣಗಳಾದ ವಾಯುಮಾಲಿನ್ಯ ಪರಿಸರ ಮಾಲಿನ್ಯ ಅಪೌಷ್ಟಿಕತೆ ಮುಖ್ಯವಾಗಿದೆ. ಹಾಗಾಗಿ ಚಳಿ ಮತ್ತು ಮಳೆಗಾಲಗಳಲ್ಲಿ ತಾಯಂದಿರು ಮಕ್ಕಳನ್ನು ಬೆಚ್ಚಗೆ ಇರಿಸಿಕೊಳ್ಳಬೇಕು.

ಅಲ್ಲದೆ ಫ್ರಿಜ್ಜಿನಲ್ಲಿಟ್ಟ ಆಹಾರಗಳನ್ನು ಸೇವಿಸಬಾರದು ಗಾಳಿಯೊಂದಿಗೆ ತೇವಾಂಶ ಸೇವಿಸಿದಾಗ ಶ್ವಾಸಕೋಶದ ಸೋಂಕು ತಗಲುತ್ತದೆ ಎಂದು ತಿಳಿಸಿದ ಅವರು, ಹೆಚ್ಚು ಹೆಚ್ಚು ಸಾಮಾಜಿಕ ಅರಿವು ಚಟುವಟಿಕೆಗಳ ಮೂಲಕ ನ್ಯೂಮೋನಿಯಾ ರೋಗ ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಎಂದರು.

 ಮಾರುತಿ ನಗರ ನಗರ ಆರೋಗ್ಯ ಕೇಂದ್ರದ ಡಾ.ಯಶಸ್ ಅವರು ಪಕ್ಕೆಲಬು ಸೆಳೆತದ ಪ್ರಾತ್ಯಕ್ಷಿಕೆ ತೋರಿಸಿದರು.
ಕಾರ್ಯಕ್ರಮದಲ್ಲಿ ಮಾರುತಿ ನಗರ ನಗರ ಆರೋಗ್ಯ ಕೇಂದ್ರದ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ತಿಪ್ಪಮ್ಮ, ಕಾತ್ಯಾಯನಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪ್ರವೀಣ್ ಕುಮಾರ್, ನಂದೀಶ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ರೂಪ, ತಾಯಂದಿರು, ಮಕ್ಕಳು, ಅತ್ತೆಯರು ಇದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";