ಗರ್ಭಾವಸ್ಥೆಯ ಮಹಿಳೆಯರಿಗೆ ಪೊಷ್ಟಿಕಾಂಶದ ಆಹಾರ ಮುಖ್ಯ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಗರ್ಭಾವಸ್ಥೆಯ ಹಂತದಲ್ಲಿರುವ ಮಹಿಳೆಯರು ಕಡ್ಡಾಯವಾಗಿ ಪೌಷ್ಟಿಕಾಂಶದ ಪ್ರಾಮುಖ್ಯತೆ, ತರಕಾರಿಗಳ ಪ್ರಾಮುಖ್ಯತೆ ಮತ್ತು ಆರೋಗ್ಯಕರ ಆಹಾರ ಮತ್ತು ಗರ್ಭಾವಸ್ಥೆಯಲ್ಲಿ ಪೋಷಣೆಯನ್ನು ನಿರ್ವಹಿಸುವುದು ಬಹಳ ಮುಖ್ಯ ಎಂದು ಜಿಲ್ಲಾ ಪೌಷ್ಟಿಕ ಮೆಲ್ವಿಚಾರಕಿ ಸಣ್ಣರಂಗಮ್ಮ ತಿಳಿಸಿದರು.

ನಗರದ ಗೋಪಾಲಪುರ ಸಮೀಪದ ಸಂತೆ ಪೇಟೆ-1ರ ಅಂಗನವಾಡಿಯಲ್ಲಿ ಗುರುವಾರ ಆಯೋಜಿಸಿದ್ದ VHND ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

- Advertisement - 

ಗರ್ಭಾವಸ್ಥೆಯಲ್ಲಿ ಪೋಷಣೆಗಾಗಿ ಸಮತೋಲಿತ ಆಹಾರ, ಸೂಕ್ತವಾದ ತೂಕ ಹೆಚ್ಚಳ, ನಿಯಮಿತ ವ್ಯಾಯಾಮ ಮತ್ತು ಅಗತ್ಯವಿರುವ ವಿಟಮಿನ್, ಖನಿಜಗಳನ್ನು ಪೂರೈಕೆ ಮಾಡುವುದು ಮುಖ್ಯ ಎಂದು ತಿಳಿಸಿದರು. ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯವನ್ನು ನಿರ್ಧರಿಸುವಲ್ಲಿ ಪೌಷ್ಟಿಕಾಂಶವು ನಿರ್ಣಾಯಕ ಪಾತ್ರ ವಹಿಸುತ್ತದೆ. ದಿನಕ್ಕೆ ಸುಮಾರು 300 ಹೆಚ್ಚುವರಿ ಕ್ಯಾಲೊರಿಗಳು ಬೇಕಾಗುತ್ತವೆ. ಇವು ಪ್ರೋಟೀನ್, ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳ ಸಮತೋಲಿತ ಆಹಾರದಿಂದ ಬರಬೇಕು. ಹಾಗಾಗಿ ಹಣ್ಣು, ತರಕಾರಿಗಳನ್ನು ಹೆಚ್ಚೆಚ್ಚು ಬಳಸಬೇಕು ಎಂದು ಅವರು ಕಿವಿ ಮಾತು ಹೇಳಿದರು.

 ಅತಿಮುಖ್ಯವಾಗಿ ಗರ್ಭಾವಸ್ಥೆಯ ಮಹಿಳೆಯರು ನಿತ್ಯ ಹುರಿದ ಮತ್ತು ಹೆಚ್ಚಿನ ಕೊಬ್ಬಿನ ಆಹಾರಗಳನ್ನು ಸೇವಿಸಬಾರದು. ಇದು ಗರ್ಭಾವಸ್ಥೆಯ ಮಧುಮೇಹದ ಅಪಾಯ ಹೆಚ್ಚಿಸಬಹುದು. ಅಧಿಕ ಕೆಫೀನ್ ಸೇವನೆ, ಇದು ಗರ್ಭಪಾತ ಮತ್ತು ಕಡಿಮೆ ಜನನ ತೂಕದ ಅಪಾಯ ಹೆಚ್ಚಿಸಬಹುದು ಎಂದು ಸಣ್ಣ ರಂಗಮ್ಮ ಎಚ್ಚರಿಸಿದರು.

- Advertisement - 

ಗರ್ಭಾವಸ್ಥೆಯಲ್ಲಿ ಸಮತೋಲಿತ ಆಹಾರವನ್ನು ಸೇವಿಸಿ, ಇದರಲ್ಲಿ ತಾಜಾ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ನೇರ ಪ್ರೋಟೀನ್ಗಳು ಸೇರಿವೆ. ವೈವಿಧ್ಯಮಯ ಆಹಾರವನ್ನು ಸೇವಿಸಬೇಕು. ಏಕೆಂದರೆ ಗರ್ಭಾವಸ್ಥೆಯಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಅಯೋಡಿನ್ ಮತ್ತು ವಿಟಮಿನ್ಗಳಂತಹ ಕೆಲವು ಪೋಷಕಾಂಶಗಳಿಗೆ ಹೆಚ್ಚುವರಿಯಾಗಿ ಬಳಸಬೇಕಾಗುತ್ತದೆ ಎಂದು ತಿಳಿಸಿದರು.  ಸಮುದಾಯ ಸಂಯೋಜಕ ಎನ್.ಉಮೇಶ್ ಮಾತನಾಡಿ ಆಹಾರದಲ್ಲಿ ಹೆಚ್ಚಿನ ಕೊಬ್ಬುಗಳು ಸಸ್ಯ ಮೂಲಗಳಿಂದ ಬರುವಂತೆ ನೋಡಿಕೊಳ್ಳಿ ಮತ್ತು ಪ್ರಾಣಿ ಮೂಲದ ಘನ ಕೊಬ್ಬುಗಳನ್ನು ಮಿತಿಗೊಳಿಸಬೇಕು ಎಂದು ಹೇಳಿದರು.

ಆಹಾರ ಕ್ರಮ ಅಥವಾ ಪೌಷ್ಟಿಕಾಂಶದ ಬಗ್ಗೆ ಯಾವುದೇ ಪ್ರಶ್ನೆಗಳಿದ್ದರೆ ನಿಮ್ಮ ವೈದ್ಯ ಅಥವಾ ನೋಂದಾಯಿತ ಆಹಾರ ತಜ್ಞರನ್ನು ಸಂಪರ್ಕಿಸಬೇಕು. ಪೌಷ್ಠಿಕಾಂಶ, ಆರೋಗ್ಯಕರ ಜೀವನಶೈಲಿ ಸರಿಯಾದ ಆಹಾರದ ಬಗ್ಗೆ ಚೆನ್ನಾಗಿ ವಿವರಿಸಿದರಲ್ಲದೆ ಗರ್ಭಾವಸ್ಥೆಯಲ್ಲಿ ರೋಗ ನಿರೋಧಕತೆ ಹೆಚ್ಚಿಸಿಕೊಳ್ಳುವುದರ ವಿಧಾನವನ್ನು ಅವರು ಹಾಡು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಿದರು.

ಪ್ರಾಥಮಿಕ ಆರೋಗ್ಯ ರಕ್ಷಣಾ ಅಧಿಕಾರಿ ಅಬ್ಬಾಸ್, ಆರೋಗ್ಯ ಸಹಾಯಕಿ ಗೌರಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಶೌಕಿನ್, ಗಂಗಮ್ಮ, ಲಕ್ಷ್ಮಿ, ಕೋಮಲ ಹಾಗೂ ಆಶಾ ಕಾರ್ಯಕರ್ತೆ ಲಲಿತಮ್ಮ ಭಾಗವಹಿಸಿದ್ದರು.

 

Share This Article
error: Content is protected !!
";