ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಬಾಗಲಗುಂಟೆ, ಪೀಣ್ಯ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ಬೆಳ್ಳಂಬೆಳಗ್ಗೆ ಬಾರ್ ಓಪನ್ ಮಾಡುತ್ತಿರುವುದರಿಂದ ಪೊಲೀಸರು ದಾಳಿ ಮಾಡಿದ್ದಾರೆ.
ಬಾಗಲಗುಂಟೆಯ ಚೇತನ್ ಬಾರ್, ಪೀಣ್ಯದ ನಂದಿ ಗ್ರ್ಯಾಂಡ್ ಬಾರ್ನಲ್ಲಿ ಎಂಆರ್ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮದ್ಯ ಮಾರಾಟ ಆರೋಪ ಕೇಳಿಬಂದಿದ್ದು, ಇದರಿಂದ ಎಚ್ಚೆತ್ತು ಬಾಗಲಗುಂಟೆ ಹಾಗೂ ಪೀಣ್ಯ ಠಾಣೆ ಪೊಲೀರು ದಾಳಿ ಮಾಡಿದ್ದಾರೆ.
ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿದ್ದ ಬಾರ್ ಸಿಬ್ಬಂದಿಯನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದು, ಸಾವಿರಾರು ರೂಪಾಯಿ ಬೆಲೆಬಾಳುವ ಮದ್ಯದ ಬಾಕ್ಸ್ಗಳನ್ನು ಜಪ್ತಿ ಮಾಡಿದ್ದಾರೆ.