ಮಾರ್ಚ್-18 ರಿಂದ ಪೊಲೀಸ್ ಠಾಣೆ ಕಣಿವೆ ಮಾರಮ್ಮನ ಜಾತ್ರೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮನ ಜಾತ್ರಾ ಮಹೋತ್ಸವ ಮಾ.18 ರಿಂದ ೨೧ ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.

೧೮ ರಂದು ಸಂಜೆ ೬-೩೦ ಕ್ಕೆ ಮಧುವಣಗಿತ್ತಿ ಶಾಸ್ತ್ರ, ೨೦ ರಂದು ಹೂವಿನ ಅಲಂಕಾರ ಸಕಲ ವಾದ್ಯಗಳೊಂದಿಗೆ ನಗರದ ರಾಜಬೀದಿಗಳಲ್ಲಿ ಮೆರವಣಿಗೆ.

೨೧ ರಂದು ಬೆಳಿಗ್ಗೆ ೧೦ ಕ್ಕೆ ಜಾತ್ರಾ ಪ್ರಯುಕ್ತ ಕಣಿವೆಮಾರಮ್ಮನಿಗೆ ವಿಶೇಷ ಪೂಜೆ. ನಂತರ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಅನ್ನಸಂತರ್ಪಣೆಯಿರುತ್ತದೆ.

ಅಕ್ಕಿ, ಬೇಳೆ, ಬೆಲ್ಲ, ಎಣ್ಣೆ, ಧವಸ, ಧಾನ್ಯಗಳನ್ನು ಕೊಡುವವರು ದೇವಸ್ಥಾನದಲ್ಲಿ ಕೊಟ್ಟು ರಸೀದಿಯನ್ನು ಪಡೆಯತಕ್ಕದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಣಿವೆಮಾರಮ್ಮನ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಕಮಿಟಿ ಕೋರಿದೆ.

 

- Advertisement -  - Advertisement - 
Share This Article
error: Content is protected !!
";