ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ಪಟ್ಟಣದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಹಾಗೂ ಈದ್ ಮಿಲಾಹಿದ್ ಕುರಿತು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯ ಡಿವೈಎಸ್ಪಿ ಯಾದ ಮಲ್ಲೇಶ್ ದೊಡ್ಮನಿ ಇವರ ನೇತೃತ್ವದಲ್ಲಿ ನಡೆದ ಪೊಲೀಸ್ ಪಥಸಂಚಲನ ಮಾಡುವುದರೊಂದಿಗೆ ಸಾರ್ವಜನಿಕರಲ್ಲಿ ಯಾವುದೇ ಭಯ ಭೀತಿ ಇಲ್ಲದೆ ಧಾರ್ಮಿಕ ಹಬ್ಬಗಳನ್ನು ಉತ್ಸಾಹದಿಂದ ಆಚರಣೆಗಳನ್ನು ಮಾಡಿ ನಿಮ್ಮ ಜೊತೆ ಪೊಲೀಸ್ ಇಲಾಖೆ ಯಾವಾಗಲೂ ರಕ್ಷಣೆಯಲ್ಲಿ ಇರುತ್ತದೆ,ಎಂಬ ಸಂದೇಶದೊಂದಿಗೆ ಕೂಡ್ಲಿಗಿ ಪಟ್ಟಣದ ಅನೇಕ ವಾರ್ಡ್ ಗಳ ಮೂಲಕ ಮಾರ್ಚ್ ರೂಟ್ ಮಾಡಲಾಯಿತು.
ಹಾಗೆ ಈ ಪಥಸಂಚಲನದ ಸಂದೇಶ ಯಾವುದೇ ಸಮುದಾಯಗಳು ಹಬ್ಬ ಆಚರಣೆಗಳು ಮಾಡುವಾಗ ಯಾವುದೇ ತರಹದ ಕೋಮು ಗಲಭೆಯ ಗದ್ದಲ ಗಲಾಟೆಗಳಿಗೆ ಆಸ್ಪದ ವಿಲ್ಲ, ಹಾಗೆ ಯಾವುದೇ ಕಿಡಿಗೇಡಿಗಳು ಧಾರ್ಮಿಕ ಹಬ್ಬಗಳಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಪೊಲೀಸ್ ರಕ್ಷಣೆ ಸೂಕ್ತವಾದ ಬಂದೋಬಸ್ತಿನೊಂದಿಗೆ ನೀಡುವ ಸಂದೇಶವನ್ನು ಈ ಸಮಯದಲ್ಲಿ ಸಾರ್ವಜನಿಕರಲ್ಲಿ ಯಾವುದೇ ಭಯವಿಲ್ಲದೆ ಹಬ್ಬ ಆಚರಣೆ ಮಾಡಲು ಈ ಮೂಲಕ ಪಥ ಸಂಚಲನ ಮಾಡಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ ಪ್ರಹ್ಲಾದ ಆರ್ ಚೆನ್ನಗಿರಿ, ಕೂಡ್ಲಿಗಿ ಪಿಎಸ್ಐ ಸಿ ಪ್ರಕಾಶ್, ಕೊಟ್ಟೂರು ಪಿಎಸ್ಐ ಗೀತಾಂಜಲಿ ಸಿಂಧೆ, ಗುಡೆಕೋಟೆ ಪಿಎಸ್ಐ ಸುಬ್ರಹ್ಮಣ್ಯ, ಹಾಗೆ ಕೆ ಎಸ್ ಆರ್ ಪಿ ಮೂರು ತುಕಡಿಗಳ ದಂಡುಗಳ ಜೊತೆಗೆ ಕೂಡ್ಲಿಗಿ,ಕೊಟ್ಟೂರು, ಗುಡೆಕೋಟೆ, ಠಾಣೆಗಳ ಪೊಲೀಸ್ ಸಿಬ್ಬಂದಿಗಳು ಈ ಪಥ ಸಂಚಾರದಲ್ಲಿ ಭಾಗವಹಿಸಿದ್ದರು ಎಂದು ಸಿ ಅರುಣ್ ಕುಮಾರ್ ತಿಳಿಸಿದ್ದಾರೆ.

