ರಾಜಕೀಯ ಮುಖಂಡ ಚಿದಾನಂದಪ್ಪ ಇನ್ನಿಲ್ಲ
ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ರಾಜಕೀಯ ಪ್ರಭಾವಿ ಮುಖಂಡ ಎಂ.ಜಿ ಐನಹಳ್ಳಿ ಹೆಚ್.ಚಿದಾನಂದಪ್ಪ ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಶುಕ್ರವಾರ ರಾತ್ರಿ ನಿಧನರಾದರು.
ಮೃತರು ಇಬ್ಬರು ಪತ್ನಿಯರಾದ ಗೌರಮ್ಮ, ರತ್ನಮ್ಮ, ಮೂರು ಹೆಣ್ಣು ಮಕ್ಕಳು, ಐದು ಗಂಡು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಸ್ನೇಹಿತರು, ಬಂದು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆ ಶನಿವಾರ ಸಂಜೆ ಸ್ವಗ್ರಾಮದ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿದ್ದಾರೆ.

