ಪರಮೇನಹಳ್ಳಿ ಹಾಲು ಉತ್ಪಾದಕ ಸಂಘಕ್ಕೆ ಡಿ.15 ರಂದು ಮತದಾನ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಪರಮೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ.

ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿ.7 ರಂದು ಕೊನೆಯ ದಿನ, ಡಿ-8 ರಂದು ನಾಮಪತ್ರ ಪರಿಶೀಲನೆ, ಡಿ.9 ರಂದು ನಾಮಪತ್ರ ಹಿಂಪಡೆಯುವ ಕೊನೆ ದಿನ ಆಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆಗೆ ಮತದಾನ ಅವಶ್ಯಕವಾದಲ್ಲಿ ಡಿ.15 ರಂದು ಸಂಘದ ಕಛೇರಿಯಲ್ಲಿ ಜರುಗಲಿದೆ. ಹೆಚ್ಚಿನ ಮಾಹಿತಿಗಾಗಿ ರಿಟರ್ನಿಂಗ್ ಅಧಿಕಾರಿ ಅಥವಾ ಸಂಘದ ಕಾರ್ಯದರ್ಶಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಮುಖ್ಯಪ್ರವರ್ತಕರು ನಿಯೋಜಿತ ಪರಮೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ನಿ. ಪರಮೇನಹಳ್ಳಿ, ಹಿರಿಯೂರು ಇವರು ಪ್ರಕಟಣೆ ಹೊರಡಿಸಲಾಗಿದೆ.

 

- Advertisement -  - Advertisement -  - Advertisement - 
Share This Article
error: Content is protected !!
";