ಅಶ್ಲೀಲ, ಕೆಟ್ಟ ಕಮೆಂಟ್ ಈಗ ಬರುತ್ತಿಲ್ಲ-ನಟಿ ರಮ್ಯಾ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಶ್ಲೀಲ ಕಮೆಂಟ್ ಹಾಕುತ್ತಿದ್ದ ದರ್ಶನ್ ಅಭಿಮಾನಿಗಳ ವಿರುದ್ಧ ತಾವು ನೀಡಿದ್ದ ದೂರಿನ ಬಗ್ಗೆ ಮಾಜಿ ಸಂಸದೆ, ನಟಿ ರಮ್ಯಾ ಮಾತನಾಡಿ, ಅದೊಂದು ಒಳ್ಳೆಯ ಹೆಜ್ಜೆ ಆಗಿತ್ತು. ಈಗ ಕಮೆಂಟ್ ಸೆಕ್ಷನ್​ಗಳು ತುಸು ಕ್ಲೀನ್ ಆಗಿವೆ ಎಂದು ಹೇಳಿದರು.

ದೂರು ನೀಡಿದ ನಂತರ ಕೆಟ್ಟ ಕಮೆಂಟ್​ಗಳು ಹೆಚ್ಚಾಗಿ ಬರುತ್ತಿಲ್ಲ, ಮಹಿಳೆಯರಿಗೆ ಇದರಿಂದ ಧೈರ್ಯ ಬಂದಿದೆ. ನಾನು ನೀಡಿರುವ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದ್ದು ಈ ವರೆಗೆ ಏಳು ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.

- Advertisement - 

ಕೆಟ್ಟ ಕಮೆಂಟ್ ಹಾಕಿದ್ದ ಕೆಲವರಂತೂ ಮನೆ ಬಿಟ್ಟು ಪರಾರಿ ಆಗಿದ್ದಾರೆ. ಪೊಲೀಸರು ಅವರ ಹುಡುಕಾಟ ಮಾಡುತ್ತಿದ್ದಾರೆ ಎಂದು ರಮ್ಯಾ ತಿಳಿಸಿದರು.

 

- Advertisement - 

 

 

Share This Article
error: Content is protected !!
";