ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಅಂಚೆ ವಿಭಾಗೀಯ ಡಾಕ್ ಅದಾಲತನ್ನು ಇದೇ ಮಾರ್ಚ್ 21ರಂದು ಮಧ್ಯಾಹ್ನ 3 ಗಂಟೆಗೆ ಚಿತ್ರದುರ್ಗ ನಗರದ ಕೋಟೆ ರಸ್ತೆಯ ಕಾಮನಬಾವಿ ಬಡಾವಣೆಯ ಫಿಲ್ಟರ್ ಹೌಸ್ ಹತ್ತಿರದ ಚಿತ್ರದುರ್ಗ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಸಲಾಗುವುದು.
ಸಾರ್ವಜನಿಕರು ಮತ್ತು ಅಂಚೆ ಗ್ರಾಹಕರು ಅಂಚೆ ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ಮತ್ತು ಸಲಹೆಗಳನ್ನು ಮಾರ್ಚ್ 20 ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಅಂಚೆ ಅಧೀಕ್ಷಕರ ಕಚೇರಿ, ಕೋಟೆ ರಸ್ತೆ, ಫಿಲ್ಟರ್ ಹೌಸ್ ಹತ್ತಿರ, ಕಾಮನ ಬಾವಿ ಬಡಾವಣೆ, ಚಿತ್ರದುರ್ಗ–577501 ಇವರಿಗೆ ಮುಂದಿನ ಕ್ರಮಕ್ಕಾಗಿ ತಲಪುವಂತೆ ಕಳುಹಿಸಬೇಕು ಎಂದು ಚಿತ್ರದುರ್ಗ ವಿಭಾಗದ ಅಂಚೆ ಅಧೀಕ್ಷಕಿ ಕೆ.ಆರ್.ಉಷಾ ತಿಳಿಸಿದ್ದಾರೆ.