ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ ವೀರ ಮದಕರಿ ನಾಯಕ ನಾಟಕ ಪ್ರದರ್ಶನ ಮುಂದೂಡಿಕೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾ ವಕೀಲರ ಸಾಂಸ್ಕೃತಿಕ ಕಲಾ ಬಳಗ. ಜಿಲ್ಲಾ ವಕೀಲರ ಸಂಘದಿಂದ ಅಕ್ಟೋಬರ್ 13 ರಂದು ಭಾನುವಾರ ನಡೆಯಬೇಕಾಗಿದ್ದ *ರಾಜ ವೀರ ಮದಕರಿ ನಾಯಕ* ಎಂಬ ಐತಿಹಾಸಿಕ ನಾಟಕ ವನ್ನು ಹವಾಮಾನ ವೈಪರೀತ್ಯದ ಕಾರಣ ಹಾಗೂ ಎಡೆಬಿಡದೆ ಸುರಿಯುತ್ತಿರುವ ಮಳೆಯ ಕಾರಣದಿಂದ ಅನಿವಾರ್ಯವಾಗಿ ಬಾರವಾದ ಮನಸ್ಸಿನಿಂದ ರಾಜ ವೀರ ಮದಕರಿ ನಾಯಕ ನಾಟಕ ಪ್ರದರ್ಶನವನ್ನು ಮುಂದೂಡಲಾಗಿರುತ್ತದೆ.
ಆದ್ದರಿಂದ ಕೋಟೆ ನಾಡಿನ ಕಲಾಭಿಮಾನಿಗಳು ಕಲಾಪೋಷಕರು ಸಹಕರಿಸಬೇಕಾಗಿ ಜೊತೆಗೆ ತಮ್ಮಲ್ಲಿ ಸವಿನಯ ಮನವಿ ಹಾಗೂ ಮುಂದಿನ ದಿನಾಂಕವನ್ನು ಶೀಘ್ರದಲ್ಲಿ ತಿಳಿಸಲಾಗುವುದು.
ಆದ್ದರಿಂದ ಕಲಾವಿದರ ಕಲಾಪೋಷಕರು ಕಲಾಭಿಮಾನಿಗಳಿಗೆ ನಿರಾಶೆಯಾಗಿದ್ದರಿಂದ ತಮ್ಮಲ್ಲಿ ಕ್ಷಮೆ ಯಾಚಿಸುತ್ತೆವೆ ಎಂದು ಕಲಾವಿದರು ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಸಿ ಶಿವುಯಾದವ್ ತಿಳಿಸಿದ್ದಾರೆ.