ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೋಳಿ, ಮೀನು, ಮಟನ್ ಕಟ್ಟು ಮಾಡಿ ಘನ ತ್ಯಾಜ್ಯವನ್ನು ರಸ್ತೆಗೆ ಅಥವಾ ಹೊರವಲಯದಲ್ಲಿ ಹಾಕುತ್ತಿದ್ದು ನಾಯಿಗಳ ಹಾವಳಿ ಜಾಸ್ತಿಯಾಗಿದ್ದು ಚಿಕನ್ ಮೀನು ಮಟನ್ ಮಾರಾಟ ಮಾಡುವ ಮಾಲೀಕರ ಮೇಲೆ ಸುಪ್ರೀಂ ಕೋರ್ಟ್ ಆದೇಶದಂತೆ ಕೇಸ್ ದಾಖಲೆಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಎ. ವಾಸೀಂ ಎಚ್ಚರಿಸಿದರು.
ನಗರಸಭೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೋಳಿ ಮೀನು ಮಟನ್ ಮಾರಾಟಗಾರರ ಮಹತ್ವದ ಸಭೆಯಲ್ಲಿ ಅವರು ಮಾತನಾಡಿದರು.
ಚಿಕನ್ ಮಟನ್ ಮಾರಾಟ ಮಾಡುವ ಅಂಗಡಿಯಲ್ಲಿ ಸ್ವಚ್ಛತೆ ಕಾಪಾಡಿದರೆ ಸಾರ್ವಜನಿಕರು ಅಂಗಡಿಯಲ್ಲಿ ವ್ಯಾಪಾರಕ್ಕೆ ಬರುತ್ತಾರೆ, ಸಾರ್ವಜನಿಕರು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತಾರೆ ಎನ್ನುವ ಅಂಶ ಗಮನದಲ್ಲಿರಬೇಕು ಎಂದು ವಾಸೀಂ ತಾಕೀತು ಮಾಡಿದರು.
ಸ್ವಚ್ಛತಾ ಕಡೆ ಅಂಗಡಿ ಮಾಲೀಕರು ಹೆಚ್ಚು ಗಮನ ಹರಿಸಬೇಕು. ಚಿಕನ್ ಮಟನ್ ಕಟ್ ಮಾಡಿ ಘನ ತ್ಯಾಜ್ಯ ಮತ್ತು ಇತರೆ ತ್ಯಾಜ್ಯವನ್ನು ಬೇಕಾಬಿಟ್ಟಿ ಸಿಕ್ಕ ಸಿಕ್ಕ ಸ್ಥಳದಲ್ಲಿ ಬಿಸಾಕುವುದರಿಂದ ಬೀದಿ ನಾಯಿಗಳ ಹಾವಳಿ ಜಾಸ್ತಿ ಆಗುವುದರ ಜೊತೆಗೆ ಪರಿಸರ ಹಾಳಾಗುತ್ತದೆ. ದಿನನಿತ್ಯ ನಗರಸಭೆಯ ಗಾಡಿಗಳು ಬರುತ್ತವೆ ಘನ ತ್ಯಾಜ್ಯ ಕಸ, ಸೇರಿದಂತೆ ಮಟನ್ ಮಾರುಕಟ್ಟೆಯ ಕಲ್ಮಶವನ್ನು ಗಾಡಿಗಳಿಗೆ ಹಾಕಬೇಕು ಎಂದು ಪೌರಾಯುಕ್ತರು ಸೂಚನೆ ನೀಡಿದರು.
ಮಾಂಸದ ತ್ಯಾಜ್ಯವನ್ನು ಎಲ್ಲಂದರೆ ಅಲ್ಲೇ ಹಾಕಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ನಗರದ ಸ್ವಚ್ಛತೆಗೆ ನೀವು ಸಹ ಕೈ ಜೋಡಿಸಿದರೆ ಪ್ರತಿಯೊಬ್ಬರೂ ಸ್ವಚ್ಛತೆಗೆ ಮುಂದಾಗುತ್ತಾರೆ ಎಂದು ವಾಸೀಂ ತಿಳಿಸಿದರು.
ಕೋಳಿ ಮತ್ತು ಮಟನ್ ಕಟ್ ಮಾಡಿದ ಘನ ತ್ಯಾಜ್ಯವನ್ನು ವೇದಾವತಿ ನದಿಗೆ ಹಾಕುತ್ತಿದ್ದು ಈಗಾಗಲೇ ಸಾಕಷ್ಟು ದೂರಗಳು ಬಂದಿವೆ. ಇನ್ನು ಮುಂದೆ ಎಚ್ಚೆತ್ತುಕೊಂಡು ಸಿಕ್ಕ ಸಿಕ್ಕಲ್ಲಿ ತ್ಯಾಜ್ಯ ಹಾಕದೆ ಸ್ವಚ್ಛತೆಗೆ ಮುಂದಾಗಬೇಕು ಪರಿಸರ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ ಎಂದರು.
ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ-
ನಗರ ವ್ಯಾಪ್ತಿಯಲ್ಲಿ ಸುಮಾರು 1650 ನಾಯಿಗಳಿರುವುದು ಕಂಡು ಬಂದಿದ್ದು ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿ ಪ್ರತಿ ವಾರ್ಡ್ ಗಳಲ್ಲಿ ಎರಡೆರಡು ಫೀಡಿಂಗ್ ಝೋನ್ ಗಳನ್ನು ಗುರುತಿಸಿ ಅಲ್ಲಿಯೇ ಬೌಲ್ ವ್ಯವಸ್ಥೆ ಮಾಡಿ ನಾಯಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪೌರಾಯುಕ್ತ ವಾಸೀಂ ತಿಳಿಸಿದರು.
ಬೀದಿ ನಾಯಿಗಳಲ್ಲದೆ ಎಲ್ಲಾ ಸರ್ಕಾರಿ, ಖಾಸಗಿ ಸಂಸ್ಥೆಗಳು, ಕೆಎಸ್ಆರ್ ಟಿಸಿ ಬಸ್ ಸ್ಟಾಂಡ್, ಕ್ರೀಡಾಂಗಣ ಕಾಂಪೌಂಡ್ ಒಳಗಡೆಯಿರುವ ನಾಯಿಗಳನ್ನು ಪರಿಶೀಲಿಸಿ ಆಯಾ ಸಂಸ್ಥೆ ಗಳ ನೋಡೆಲ್ ಆಫೀಸರ್ ಗಳ ಹತ್ತಿರ ಸಹಿ ಪಡೆದು ಎಲ್ಲಾ ನಾಯಿಗಳನ್ನು ಶೆಲ್ಟರ್ ನಲ್ಲಿ ಹಾಕಿ ಸಾಕುವ ವ್ಯವಸ್ಥೆ ಕಲ್ಪಿಸಲಾಗುವುದು. ಮಟನ್, ಚಿಕೆನ್ ಅಂಗಡಿ ಮಾಲೀಕರಿಗೆ ಮುಂದೆ ನಿಮ್ಮ ನಿಮ್ಮ ಅಂಗಡಿಗಳ ಮುಂದೆ ಆಹಾರ ಹಾಕುವುದು ಕಂಡು ಬಂದರೆ ಕೇಸ್ ಹಾಕಲಾಗುವುದು ಮತ್ತು ಯಾರಿಗಾದರೂ ಕಚ್ಚಿದರೆ ಆ ಅಂಗಡಿಯವರೇ ಜವಾಬ್ದಾರರು ಎಂದು ತಿಳಿಸಿದರು.
ನೋಡಲ್ ಅಧಿಕಾರಿ ನೇಮಕ-
ಒಬ್ಬರು ನೋಡೆಲ್ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಸೂಚಿಸಿದರು. ಅದರಂತೆ ಮುಂದುವರೆದು ಸುಪ್ರೀಂ ಕೋರ್ಟ್ ಆದೇಶದಂತೆ ಸೂಚನೆಗಳನ್ನು ಸಾರ್ವಜನಿಕರಿಗೆ ತಲುಪಲು ಮತ್ತು ವಾರ್ಡ್ ವಾರ್ಡ್ ಗಳಲ್ಲಿ ಫೀಡಿಂಗ್ ಝೋನ್ ಮಾಡಿರುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ನಗರಸಭೆ ಆಟೋ ಗಳ ಮೂಲಕ ಪ್ರಚಾರ ಹಾಗೂ ಪಾಂಪ್ಲೆಟ್ಸ್ ಮಾಡಿಸಿ ಮನೆ ಮನೆಗಳಿಗೆ ಹಂಚಿಸಲಾಗುವುದು. ಎಂದು ತಿಳಿಸಿದರು ಯಾರಿಗಾದರೂ ಆಸಕ್ತಿ ಇದ್ದಾರೆ ನಾಯಿಗಳಿಗೆ ಆಹಾರ ಹಾಕಲು ಬೌಲ್ ಗಳ ವ್ಯವಸ್ಥೆ ಮಾಡಲು ಕೇಳಿದಾಗ ಚಿಕನ್ ಅಂಗಡಿ ಮಾಲೀಕರದ ಹೈದರಾಲಿ ಕರ್ನಾಟಕ ಚಿಕನ್ ಸೆಂಟರ್ ಕೊಡಿಸುವುದಾಗಿ ಹೇಳಿದರು.
ಸಭೆಯಲ್ಲಿ ಆಶ್ರಯ ಕಮಿಟಿ ಸದಸ್ಯರು ಹಾಗೂ ಚಿಕನ್ ಮಟನ್ ಸಂಘದ ಸದಸ್ಯರು, ಪ್ರಾಣಿ ದಯಾ ಸಂಘದ ರಘು ರಾಮ್, ಆರೋಗ್ಯ ನೀರಿಕ್ಷಕರಾದ ಸುನಿಲ್ ಕುಮಾರ್, ಸಂಧ್ಯಾ, ಮಹಾಲಿಂಗಪ್ಪ, ಅಶೋಕ್, ದೆಪ್ಪೇದರು ಕಾರ್ಮಿಕರು ಹಾಜರಿದ್ದರು.
“ನಗರದ ಬೀದಿ ನಾಯಿಗಳಿಗೆ ಆಹಾರ ನೀಡಬೇಕೆಂದು 16 ಸ್ಥಳಗಳನ್ನು ನಗರಸಭೆ ವತಿಯಿಂದ ಗುರುತು ಮಾಡಲಾಗಿದ್ದು ನಾಗರಿಕರು ಎಲ್ಲೆಂದರಲ್ಲಿ ಆಹಾರ ನೀಡಿದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ದಂಡ ವಿಧಿಸಲಾಗುವುದು, ನಾಗರಿಕರು ನಾಯಿಗಳ ಕಾಟವನ್ನು ತಪ್ಪಿಸಲು ನಗರಸಭೆ ನಿಗದಿ ಮಾಡಿದ ಸ್ಥಳದಲ್ಲಿ ಆಹಾರಗಳನ್ನು ನೀಡಿಬೇಕು”.
ಎ.ವಾಸೀಂ, ಪೌರಾಯುಕ್ತರು, ನಗರಸಭೆ, ಹಿರಿಯೂರು.

