ನ.26ರಂದು ವಿದ್ಯುತ ವ್ಯತ್ಯಯ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಉಪವಿಭಾಗದ ವ್ಯಾಪ್ತಿಯ ರಂಗನಾಥಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ 3ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಿಸುವುದರಿಂದ ಇದೇ .26ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

   ರಂಗನಾಥಪುರ, ಹಾರನಕಟ್ಟೆ, ಕುಂದಲಗುರು, ಕುರುಬರಹಳ್ಳಿ, ಸಮುದ್ರದಹಳ್ಳಿ, ಮ್ಯಾದನಹೊಳೆ, ಕೋಡಿಹಳ್ಳಿ, ಶಿವಪುರ, ಶಿವನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ ವ್ಯತ್ಯಯವಾಗಲಿದೆ.

  ಗ್ರಾಹಕರು, ರೈತರು, ಸಾರ್ವಜನಿಕರು ಸಹಕರಿಸಬೇಕು ಎಂದು ಹಿರಿಯೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಪೀರ್ಸಾಬ್ ಕೋರಿದ್ದಾರೆ.

Share This Article
error: Content is protected !!
";